ಭಾರತದಲ್ಲೂ ನ್ಯೂಡ್ ಪ್ರವಾಸಿ ತಾಣವಿದೆ. ಇದ್ರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಫ್ರಾನ್ಸ್, ಇಟಲಿ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರ ಇಂಥ ಪ್ರವಾಸಿ ತಾಣವಿದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದ್ರೆ ಭಾರತದಲ್ಲೂ ನ್ಯೂಡ್ ಬೀಚ್ ಸಾಕಷ್ಟಿದೆ.
ಓಂ ಬೀಚ್ ಗೋಕರ್ಣ: ಗೋಕರ್ಣದ ಓಂ ಬೀಚ್ ಬಗ್ಗೆ ಕನ್ನಡಿಗರಿಗೆ ತಿಳಿದೆ ಇದೆ. ಓಂ ಬೀಚ್ ವಿದೇಶಿಗರ ಪ್ರವಾಸಿ ಸ್ಥಳ ಎಂದೇ ಪ್ರಸಿದ್ದಿ. ಓಂ ಆಕಾರದಲ್ಲಿರುವ ಈ ಬೀಚ್ ಗೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ.
ಅಗತಿ ಐಲ್ಯಾಂಡ್ ( ಲಕ್ಷದ್ವೀಪ) : ತನ್ನ ಸೌಂದರ್ಯದಿಂದಲೇ ಹೆಸರು ವಾಸಿಯಾಗಿರುವ ಬೀಚ್ ಅಗತಿ ಐಲ್ಯಾಂಡ್. ಟಾಪ್ ಲೆಸ್ ಆಗಿ ಪ್ರವಾಸಿಗರು ಇಲ್ಲಿ ಸುತ್ತಾಡೋದು ಕಾಮನ್. ಕೆಲವೊಮ್ಮೆ ನಗ್ನವಾಗಿಯೂ ಪ್ರವಾಸಿಗರು ಬೀಚ್ ನಲ್ಲಿ ಸುತ್ತಾಡ್ತಾರೆ.
ಒಝರಾನ್ ಬೀಚ್ (ಗೋವಾ): ಜೋಡಿ ಹಕ್ಕಿಗೆ ಗೋವಾ ಹೇಳಿ ಮಾಡಿಸಿದ ಜಾಗ. ಗೋವಾದಲ್ಲಿ ಈ ಬೀಚ್ ಹುಡುಕೋದು ಸ್ವಲ್ಪ ಕಷ್ಟ. ಆದ್ರೆ ಈ ಬೀಚ್ ಗೆ ಹೋದ್ರೆ ಹೊರಗಿನ ಪ್ರಪಂಚ ಮರೆಯುತ್ತೀರಿ ನೀವು.
ಮಾರಾರಿ ಬೀಚ್ (ಕೇರಳ) : ಪಾರ್ಟಿ ಪ್ರಿಯರಿಗೆ ಇದು ಒಳ್ಳೆ ಸ್ಥಳ. ಮಾರಾರಿ ಬೀಚ್ ನೋಡಲು ಸುಂದರವಾಗಿದೆ. ಸುತ್ತಮುತ್ತ ತೆಂಗಿನ ಮರ ಕಣ್ಮನ ಸೆಳೆಯುತ್ತದೆ.