alex Certify ಭಾರತದಲ್ಲಿರುವ ಈ ಬೀಚ್ ಗಳ ವಿಶೇಷತೆ ಏನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿರುವ ಈ ಬೀಚ್ ಗಳ ವಿಶೇಷತೆ ಏನು ಗೊತ್ತಾ…..?

ಭಾರತದಲ್ಲೂ ನ್ಯೂಡ್ ಪ್ರವಾಸಿ ತಾಣವಿದೆ. ಇದ್ರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಫ್ರಾನ್ಸ್, ಇಟಲಿ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರ ಇಂಥ ಪ್ರವಾಸಿ ತಾಣವಿದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದ್ರೆ ಭಾರತದಲ್ಲೂ ನ್ಯೂಡ್ ಬೀಚ್ ಸಾಕಷ್ಟಿದೆ.

ಓಂ ಬೀಚ್ ಗೋಕರ್ಣ: ಗೋಕರ್ಣದ ಓಂ ಬೀಚ್ ಬಗ್ಗೆ ಕನ್ನಡಿಗರಿಗೆ ತಿಳಿದೆ ಇದೆ. ಓಂ ಬೀಚ್ ವಿದೇಶಿಗರ ಪ್ರವಾಸಿ ಸ್ಥಳ ಎಂದೇ ಪ್ರಸಿದ್ದಿ. ಓಂ ಆಕಾರದಲ್ಲಿರುವ ಈ ಬೀಚ್ ಗೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ.

ಅಗತಿ ಐಲ್ಯಾಂಡ್ ( ಲಕ್ಷದ್ವೀಪ) : ತನ್ನ ಸೌಂದರ್ಯದಿಂದಲೇ ಹೆಸರು ವಾಸಿಯಾಗಿರುವ ಬೀಚ್ ಅಗತಿ ಐಲ್ಯಾಂಡ್. ಟಾಪ್ ಲೆಸ್ ಆಗಿ ಪ್ರವಾಸಿಗರು ಇಲ್ಲಿ ಸುತ್ತಾಡೋದು ಕಾಮನ್. ಕೆಲವೊಮ್ಮೆ ನಗ್ನವಾಗಿಯೂ ಪ್ರವಾಸಿಗರು ಬೀಚ್ ನಲ್ಲಿ ಸುತ್ತಾಡ್ತಾರೆ.

ಒಝರಾನ್ ಬೀಚ್ (ಗೋವಾ): ಜೋಡಿ ಹಕ್ಕಿಗೆ ಗೋವಾ ಹೇಳಿ ಮಾಡಿಸಿದ ಜಾಗ. ಗೋವಾದಲ್ಲಿ ಈ ಬೀಚ್ ಹುಡುಕೋದು ಸ್ವಲ್ಪ ಕಷ್ಟ. ಆದ್ರೆ ಈ ಬೀಚ್ ಗೆ ಹೋದ್ರೆ ಹೊರಗಿನ ಪ್ರಪಂಚ ಮರೆಯುತ್ತೀರಿ ನೀವು.

ಮಾರಾರಿ ಬೀಚ್ (ಕೇರಳ) : ಪಾರ್ಟಿ ಪ್ರಿಯರಿಗೆ ಇದು ಒಳ್ಳೆ ಸ್ಥಳ. ಮಾರಾರಿ ಬೀಚ್ ನೋಡಲು ಸುಂದರವಾಗಿದೆ. ಸುತ್ತಮುತ್ತ ತೆಂಗಿನ ಮರ ಕಣ್ಮನ ಸೆಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...