alex Certify ಭಾನುವಾರದಂದು ಕನ್ನಡ ಕಿರುತೆರೆಯಲ್ಲಿ ಕಮಲ್ ಅಭಿನಯದ ‘ವಿಕ್ರಮ್’ ಪ್ರಸಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾನುವಾರದಂದು ಕನ್ನಡ ಕಿರುತೆರೆಯಲ್ಲಿ ಕಮಲ್ ಅಭಿನಯದ ‘ವಿಕ್ರಮ್’ ಪ್ರಸಾರ

ಲೋಕೇಶ್ ಕನಗರಾಜ್ ನಿರ್ದೇಶನದ ಕಮಲಹಾಸನ್ ನಟನೆಯ ಸೂಪರ್ ಡೂಪರ್ ಹಿಟ್ ‘ವಿಕ್ರಂ’ ಚಿತ್ರ ಜೂನ್ 3ರಂದು ತರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.

ಸುಮಾರು 500 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯಿತು. ಈ ಸಿನಿಮಾ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಜೆ 6ಗಂಟೆಗೆ ಪ್ರಸಾರವಾಗಲಿದೆ. ಈ ಕುರಿತು ಸ್ಟಾರ್ ಸುವರ್ಣ ವಾಹಿನಿ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್. ಮಹೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದ ಈ ಸಿನಿಮಾದಲ್ಲಿ ಕಮಲ್ ಹಾಸನ್ ಸೇರಿದಂತೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಸಂತನ ಭಾರತಿ, ಶಿವಾನಿ, ಗಾಯಿತ್ರಿ, ಹರೀಶ್ ಪೆರಾಡಿ, ಗೌತಮ್ ಸುಂದರರಾಜನ್ ಸೇರಿದಂತೆ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...