alex Certify ಭಕ್ತಿಯಲ್ಲಿ ನಿಂತ ವ್ಯಕ್ತಿಗೆ ಗುದ್ದಿದ ಆಟೋ; ನಾಲ್ವರ ಸ್ಥಿತಿ ಗಂಭೀರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತಿಯಲ್ಲಿ ನಿಂತ ವ್ಯಕ್ತಿಗೆ ಗುದ್ದಿದ ಆಟೋ; ನಾಲ್ವರ ಸ್ಥಿತಿ ಗಂಭೀರ….!

ತುಮಕೂರು : ಸರಕು ತುಂಬಿಕೊಂಡಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ದೇವರ ಉತ್ಸವ ನೋಡುತ್ತ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಈ ಘಟನೆ ಮಧುಗಿರಿ ತಾಲೂಕಿನ ಸಿದ್ದಾಪುರ ಗೇಟ್ ಹತ್ತಿರ ನಡೆದಿದ್ದು, ಗಂಗಾಧರ್(40) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ದೇವರ ಉತ್ಸವ ನೋಡುವುದಕ್ಕಾಗಿ ಅಲ್ಲಿಗೆ ತೆರಳಿದ್ದರು. ಅಲ್ಲಿ ಮಣ್ಣಮ್ಮ ದೇವರ ಉತ್ಸವ ನಡೆಯುತ್ತಿತ್ತು. ಹೀಗಾಗಿ ಅಲ್ಲಿದ್ದ ಜನರೊಂದಿಗೆ ಇವರು ಕೂಡ ದೇವರ ಉತ್ಸವ ವೀಕ್ಷಿಸುತ್ತಿದ್ದರು. ಆದರೆ, ವೇಗವಾಗಿ ಬಂದ ಆಟೋ ಇವರಿಗೆ ಡಿಕ್ಕಿ ಹೊಡೆದಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಗಂಗಾಧರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಮಾರ್, ದೊಡ್ಡಮ್ಮ, ನರಸಮ್ಮ ಸೇರಿದಂತೆ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...