alex Certify ಬ್ರೇಕಿಂಗ್ ನ್ಯೂಸ್: NEET MDS 2022 ಪರೀಕ್ಷೆ ದಿನಾಂಕ ಮುಂದೂಡಿದ ಕೇಂದ್ರ; ಇಂಟರ್ನ್​ಶಿಪ್​ ಸಲ್ಲಿಕೆ ಅವಧಿಯೂ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್ ನ್ಯೂಸ್: NEET MDS 2022 ಪರೀಕ್ಷೆ ದಿನಾಂಕ ಮುಂದೂಡಿದ ಕೇಂದ್ರ; ಇಂಟರ್ನ್​ಶಿಪ್​ ಸಲ್ಲಿಕೆ ಅವಧಿಯೂ ವಿಸ್ತರಣೆ

ಈ ವರ್ಷ ನಡೆಯಲಿರುವ ನೀಟ್​ ಎಂಡಿಎಸ್​ ಪರೀಕ್ಷೆಯನ್ನು ನಾಲ್ಕರಿಂದ ಆರು ವಾರಗಳ ಕಾಲ ವಿಸ್ತರಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ. ಇದರ ಜೊತೆಯಲ್ಲಿ ಪರೀಕ್ಷೆಯ ಪ್ರವೇಶಕ್ಕೆ ಅಗತ್ಯವಿರುವ ಇಂಟರ್ನ್​ಶಿಪ್​ ಪೂರ್ಣಗೊಳಿಸುವ ಕೊನೆಯ ದಿನಾಂಕದ ಅವಧಿಯನ್ನೂ ಮುಂದೂಡಿರುವುದಾಗಿ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.

NEET-MDS 2022ರ ದಿನಾಂಕವನ್ನು ನಾಲ್ಕರಿಂದ ಆರು ವಾರಗಳ ಕಾಲ ವಿಸ್ತರಿಸಲಾಗುತ್ತಿದೆ. ಎಂಡಿಎಸ್​ ಕೋರ್ಸ್​ಗಳ ಪ್ರವೇಶಕ್ಕೆ ಅಗತ್ಯವಿರುವ ಇಂಟರ್ನ್​ಶಿಪ್​ ಪೂರ್ಣಗೊಳಿಸುವ ದಿನಾಂಕವನ್ನೂ ಸಹ ಮಾರ್ಚ್​ 31ರ ಬದಲಾಗಿ ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ಈ ಹಿಂದೆ ಪ್ರವೇಶ ಪರೀಕ್ಷೆಗೆ ಹಾಜರಾಗಬಯಸುವ ಆಕಾಂಕ್ಷಿಗಳಿಗೆ ಮಾರ್ಚ್ 31ರ ಒಳಗಾಗಿ ಇಂಟರ್ನ್​ಶಿಪ್​ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಇದೀಗ ನಾಲ್ಕು ತಿಂಗಳುಗಳ ಕಾಲ ಅವಧಿ ವಿಸ್ತರಿಸಲಾಗಿದೆ.

NEET-MDA ಪರೀಕ್ಷೆಯನ್ನು ಮಾರ್ಚ್ 6, 2022 ರಂದು ನಡೆಸಬೇಕಿತ್ತು. ಆದರೆ ಈಗ ಈ ಅವಧಿಯನ್ನು ವಿಸ್ತರಿಸಲಾಗಿದೆ. ಎಂಡಿಎಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ಮುಂದೂಡಲು ಬಹಳ ದಿನಗಳಿಂದ ಬೇಡಿಕೆ ಇಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...