
NEET-MDS 2022ರ ದಿನಾಂಕವನ್ನು ನಾಲ್ಕರಿಂದ ಆರು ವಾರಗಳ ಕಾಲ ವಿಸ್ತರಿಸಲಾಗುತ್ತಿದೆ. ಎಂಡಿಎಸ್ ಕೋರ್ಸ್ಗಳ ಪ್ರವೇಶಕ್ಕೆ ಅಗತ್ಯವಿರುವ ಇಂಟರ್ನ್ಶಿಪ್ ಪೂರ್ಣಗೊಳಿಸುವ ದಿನಾಂಕವನ್ನೂ ಸಹ ಮಾರ್ಚ್ 31ರ ಬದಲಾಗಿ ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಪ್ರವೇಶ ಪರೀಕ್ಷೆಗೆ ಹಾಜರಾಗಬಯಸುವ ಆಕಾಂಕ್ಷಿಗಳಿಗೆ ಮಾರ್ಚ್ 31ರ ಒಳಗಾಗಿ ಇಂಟರ್ನ್ಶಿಪ್ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಇದೀಗ ನಾಲ್ಕು ತಿಂಗಳುಗಳ ಕಾಲ ಅವಧಿ ವಿಸ್ತರಿಸಲಾಗಿದೆ.
NEET-MDA ಪರೀಕ್ಷೆಯನ್ನು ಮಾರ್ಚ್ 6, 2022 ರಂದು ನಡೆಸಬೇಕಿತ್ತು. ಆದರೆ ಈಗ ಈ ಅವಧಿಯನ್ನು ವಿಸ್ತರಿಸಲಾಗಿದೆ. ಎಂಡಿಎಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (ಎನ್‌ಇಇಟಿ) ಮುಂದೂಡಲು ಬಹಳ ದಿನಗಳಿಂದ ಬೇಡಿಕೆ ಇಡಲಾಗಿತ್ತು.