alex Certify ಬ್ರೇಕಪ್ ನಂತ್ರ ನೀವು ಮಾಡಲೇಬೇಕಾದ ಕೆಲಸಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಪ್ ನಂತ್ರ ನೀವು ಮಾಡಲೇಬೇಕಾದ ಕೆಲಸಗಳು

ಬ್ರೇಕಪ್ ಅನ್ನೋದು ಈಗ ಸರ್ವೇಸಾಮಾನ್ಯ ಸಂಗತಿಯಾಗಿದೆ. ಪ್ರೇಮ ವೈಫಲ್ಯದ ನಂತರ ಮನಸ್ಸಿನಲ್ಲಿ ಬೇಸರ, ದುಃಖ ಮಡುಗಟ್ಟೋದು ಸಹಜ. ಏನು ಮಾಡಬೇಕು? ಏನು ಮಾಡಬಾರದು ಅನ್ನೋದು ಗೊತ್ತಾಗದಂತಹ ಸ್ಥಿತಿ ಅದು. ಬ್ರೇಕಪ್ ನಂತರ ನಿಮ್ಮ ಮೂಡ್ ಚೆನ್ನಾಗಿ ಆಗಬೇಕು ಅಂದ್ರೆ ಅದಕ್ಕಾಗಿ ನೀವು ಈ ಐದು ಕೆಲಸಗಳನ್ನು ಅವಶ್ಯವಾಗಿ ಮಾಡಿ.

ಮೇಕ್ ಓವರ್ : ಬ್ರೇಕಪ್ ನಂತರದ ಮೇಕ್ ಓವರ್ ಒಂದು ರೀತಿ ರಿವೆಂಜ್ ಇದ್ದಂತೆ. ನೀವು ಚೆನ್ನಾಗಿ ಕಂಡ್ರೆ ಅದರಿಂದ ಯಾರಿಗೂ ನಷ್ಟವಿಲ್ಲ. ಬ್ರೇಕಪ್ ನಂತರ ಮೇಕ್ ಓವರ್ ಗೆ ನಿಮಗೆ ಸಮಯ ಸಿಗುತ್ತದೆ. ನಿಮಗಿಷ್ಟವಾದ ಹೇರ್ ಕಟ್ ಮಾಡಿಸ್ಕೊಳ್ಳಿ. ವಾರ್ಡ್ ರೋಬ್ ಬದಲಾಯಿಸಿ. ಮೇಕಪ್ ಸ್ಟೈಲ್ ಕೂಡ ಚೇಂಜ್ ಮಾಡಿ. ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಅಪ್ ಲೋಡ್ ಮಾಡಿ ಎಲ್ಲರ ಗಮನಸೆಳೆಯಿರಿ.

ವರ್ಕೌಟ್ : ಪ್ರೇಮ ವೈಫಲ್ಯದ ನಂತರ ನಿಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಿ. ಬ್ರೇಕಪ್ ಆದ್ಮೇಲೆ ವರ್ಕೌಟ್  ಮಾಡೋಕೆ ಸಮಯವಿಲ್ಲ ಅನ್ನೋ ನೆಪ ಹೇಳೋದು ಕಷ್ಟ. ನಿಮ್ಮ ಫಿಟ್ನೆಸ್ ಕಡೆಗೆ ಗಮನ ಕೊಡಿ. ದೇಹ ದಣಿದರೆ ಮನಸ್ಸು ಕೂಡ ನೆಮ್ಮದಿಯಾಗಿರಬಲ್ಲದು.

ಪಾಸ್ ವರ್ಡ್ ಗಳನ್ನೆಲ್ಲ ಬದಲಾಯಿಸಿ : ಬ್ರೇಕಪ್ ನಂತರ ಇಮೇಲ್, ಫೇಸ್ಬುಕ್, ಇನ್ ಸ್ಟಾಗ್ರಾಮ್ ಎಲ್ಲಾ ಪಾಸ್ವರ್ಡ್ ಗಳನ್ನು ಬದಲಾಯಿಸಿ. ನಿಮ್ಮ ಪ್ರಿಯತಮನ ಜೊತೆಗೆ ಪಾಸ್ವರ್ಡ್ ಶೇರ್ ಮಾಡಿದ್ದೇ ಅದಲ್ಲಿ ಮೊದಲು ಅದನ್ನು ಚೇಂಜ್ ಮಾಡಿ. ಯಾಕಂದ್ರೆ ಎಕ್ಸ್ ಬಾಯ್ ಫ್ರೆಂಡ್ ನಿಮ್ಮ ಅಕೌಂಟ್ ಚೆಕ್ ಮಾಡುವ ಸಾಧ್ಯತೆ ಇರುತ್ತದೆ.

ಪಾರ್ಟಿಯ ಫೋಟೋ ಪೋಸ್ಟ್ ಮಾಡಿ : ಬ್ರೇಕಪ್ ನಂತರ ನೀವು ಎಲ್ಲವನ್ನೂ ಮರೆತು ಮೂವ್ ಆನ್ ಆಗ್ಬೇಕು ಅಂದ್ರೆ ಸೋಶಿಯಲ್ ಆಗಿ. ಸ್ನೇಹಿತರ ಜೊತೆಗೆ ಪಾರ್ಟಿ, ಟ್ರಿಪ್ ಅಂತಾ ಆನಂದದಿಂದ ಕಾಲ ಕಳೆಯಿರಿ. ಆ ಫೋಟೋಗಳನ್ನೆಲ್ಲ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಲು ಮರೆಯಬೇಡಿ.

ಮಾಜಿ ಪ್ರಿಯತಮನಿಗಾಗಿ ಖರ್ಚು ಮಾಡಿದ ಹಣ ವಾಪಸ್ ಪಡೆಯಿರಿ : ನಿಮಗೆ ಹಣದ ಅವಶ್ಯಕತೆ ಇಲ್ಲದೇ ಇರಬಹುದು, ವಾಪಸ್ ಕೇಳುವ ಮನಸ್ಸಿಲ್ಲದೇ ಇರಬಹುದು. ಆದ್ರೂ ಎಕ್ಸ್ ಬಾಯ್ ಫ್ರೆಂಡ್ ಗಾಗಿ ಖರ್ಚು ಮಾಡಿದ ಹಣವನ್ನು ವಾಪಸ್ ಪಡೆಯಿರಿ. ನಿಮ್ಮ ಮಾಜಿ ಪ್ರಿಯತಮ ಸ್ವಲ್ಪವಾದ್ರೂ ಸ್ವಾಭಿಮಾನಿಯಾಗಿದ್ರೆ ವಾಪಸ್ ಕೊಡುತ್ತಾನೆ.

ಇದನ್ನೆಲ್ಲ ಮಾಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಕೆಲವೇ ಕ್ಷಣಗಳಾದ್ರೂ ಸಂತೋಷವಾಗಿ ಇರಬಹುದು. ಹೀಗೆ ಮಾಡುತ್ತಲೇ ಹಳೆಯದನ್ನೆಲ್ಲ ಮರೆತು ಮುಂದಡಿ ಇಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...