ರಸಮಲಾಯಿ ಎಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬ್ರೆಡ್ ನಿಂದ ಸುಲಭವಾಗಿ ರಸಮಲಾಯಿ ಮಾಡುವ ವಿಧಾನ ಇಲ್ಲಿದೆ. ಸಿಹಿ ತಿನ್ನುವ ಮನಸ್ಸಾದಾಗ ಅಥವಾ ಮಕ್ಕಳಿಗೆ ಸ್ನ್ಯಾಕ್ಸ್ ಆಗಿ ಕೂಡ ಇದನ್ನು ಮಾಡಿಕೊಡಬಹುದು. ಇದನ್ನು ಮಾಡುವುದು ಹೇಗೆ ಏನೇನು ಬೇಕು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್: 15000 ರೂ. ಹೆಚ್ಚಾಗಲಿದೆ ಸಂಬಳ
ಬೇಕಾಗುವ ಸಾಮಾಗ್ರಿಗಳು: ಬ್ರೆಡ್ ಸ್ಲೈಸ್ -6, ಹಾಲು-3 ಕಪ್, ತಾಜಾ ಕೆನೆ-1/2 ಕಪ್, ಮಿಲ್ಕ್ ಮೈಡ್-5-6 ಟೇಬಲ್ ಸ್ಪೂನ್, ಕೇಸರಿ ಎಸಳು-6, ಏಲಕ್ಕಿ ಪುಡಿ-ಚಿಟಿಕೆ, ಬಾದಾಮಿ-ಸಣ್ಣದ್ದಾಗಿ ಕತ್ತರಿಸಿದ್ದು 1 ಟೇಬಲ್ ಸ್ಪೂನ್.
ಒಂದು ಪಾತ್ರೆಗೆ ಹಾಲು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಕೆನೆ ಹಾಗೂ ಮಿಲ್ಕ್ ಮೈಡ್ ಅನ್ನು ಸೇರಿಸಿಕೊಳ್ಳಿ. ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ಎಸಳನ್ನು ಸೇರಿಸಿ ತಣ್ಣಗಾಗಲು ಬಿಡಿ. ಬ್ರೆಡ್ ಪೀಸ್ ಗಳನ್ನು ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ.
ನಂತರ ಸ್ವಲ್ಪ ಹಾಲನ್ನು ತೆಗದುಕೊಂಡು ಇದನ್ನು ಕತ್ತರಿಸಿಟ್ಟುಕೊಂಡ ಬ್ರೆಡ್ ಮೇಲೆ ಹಾಕಿ ಬ್ರೆಡ್ ಈ ಹಾಲಿನಲ್ಲಿ ನೆನೆಯಲಿ. ನಂತರ ಉಳಿದ ಹಾಲನ್ನು ಹಾಗೂ ನೆನೆಸಿಟ್ಟುಕೊಂಡ ಬ್ರೆಡ್ ಅನ್ನು ಬೇರೆ ಬೇರೆಯಾಗಿ ಫ್ರಿಡ್ಜ್ ನಲ್ಲಿಡಿ. 40 ನಿಮಿಷಗಳ ನಂತರ ಉಳಿದ ಹಾಲನ್ನು ಬ್ರೆಡ್ ಮೇಲೆ ಹಾಕಿ. ಇದರ ಮೇಲೆ ಹಾಕಿ ಕತ್ತರಿಸಿಟ್ಟುಕೊಂಡ ಬಾದಾಮಿಯನ್ನು ಹಾಕಿ 3 ಗಂಟೆ ಹೊತ್ತು ಫ್ರಿಡ್ಜ್ ನಲ್ಲಿಟ್ಟರೆ ಬ್ರೆಡ್ ರಸಮಲಾಯಿ ರೆಡಿ.