alex Certify ಬ್ಯಾಂಕ್ ಕ್ಯಾಶಿಯರ್ ನಿಂದಲೇ ಬ್ಯಾಂಕ್ ಗೆ ಕನ್ನ; ನಕಲಿ ಕೀ ಬಳಸಿ ಕೈಚಳಕ ತೋರಿದ್ದ ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಕ್ಯಾಶಿಯರ್ ನಿಂದಲೇ ಬ್ಯಾಂಕ್ ಗೆ ಕನ್ನ; ನಕಲಿ ಕೀ ಬಳಸಿ ಕೈಚಳಕ ತೋರಿದ್ದ ಆರೋಪಿಗಳು ಅರೆಸ್ಟ್

ಬೆಳಗಾವಿ: ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಇದೀಗ ಬ್ಯಾಂಕ್ ಕ್ಯಾಶಿಯರ್ ನನ್ನೇ ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದಲ್ಲಿ ನಡೆದಿದೆ.

ನಕಲಿ ಕೀ ಬಳಲಿ ಡಿಸಿಸಿ ಬ್ಯಾಂಕ್ ನಲ್ಲಿ 4.37 ಕೋಟಿ ನಗದು, 1.63 ಕೋಟಿ ಚಿನ್ನಾಭರಣ ದರೋಡೆ ಪ್ರಕರಣ ಬೆನ್ನು ಹತ್ತಿದ ಪೊಲೀಸರು ಇದೀಗ ಬ್ಯಾಂಕ್ ಕ್ಯಾಶಿಯರ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

75 ರೂ. ಏರಿಕೆಯಾದ ಡೀಸೆಲ್ ಲೀ.ಗೆ 214 ರೂ., ಪೆಟ್ರೋಲ್ ಲೀ.ಗೆ 254 ರೂ. ಶ್ರೀಲಂಕಾದಲ್ಲಿ ತೈಲ ದರ ಭಾರೀ ಹೆಚ್ಚಳ

ಬ್ಯಾಂಕ್ ಕ್ಯಾಶಿಯರ್ ಆಗಿದ್ದ ಬಸವರಾಜ್ (30), ಸಂತೋಷ್ ಕಂಬಾರ (31) ಹಾಗೂ ಗಿರೀಶ್ ಬಳವಲ್ಲ(26) ಬಂಧಿತರು. ಅದ್ದೂರಿಯಾಗಿ ಮದುವೆಯಾಗಬೇಕು ಎಂಬ ಕಾರಣಕ್ಕೆ ಬ್ಯಾಂಕ್ ಕ್ಯಾಶಿಯರ್ ಬಸವರಾಜ್ ತನ್ನ ಗೆಳೆಯರೊಂದಿಗೆ ಸೇರಿ ನಕಲಿ ಕೀ ಬಳಸಿ ಮಾರ್ಚ್ 6ರಂದು ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿದ್ದ.

ಹೀಗೆ ಕದ್ದ ಹಣ, ಚಿನ್ನಾಭರಣಗಳನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನಗದು, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...