alex Certify ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ…..!

ನಿಮಗೆ ಬ್ಯಾಂಕ್‌ ಕೆಲಸಗಳೇನಾದರೂ ಇದ್ದಲ್ಲಿ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ರಿಸರ್ವ್ ಬ್ಯಾಂಕ್  ರಜೆಗಳ ಲಿಸ್ಟ್‌ ಪ್ರಕಾರ ಫೆಬ್ರವರಿಯಲ್ಲಿ ಬ್ಯಾಂಕುಗಳು 10 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳೂ ಸೇರಿವೆ.ಪಟ್ಟಿಯಲ್ಲಿರುವ ಕೆಲವು ರಜಾದಿನಗಳು ನಿರ್ದಿಷ್ಟ ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ. ಫೆಬ್ರವರಿ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು RBI ಬಿಡುಗಡೆ ಮಾಡಿದೆ ಮತ್ತು ಮಾರ್ಗಸೂಚಿಗಳ ಪ್ರಕಾರ, ನಿರ್ದಿಷ್ಟ ರಾಜ್ಯವನ್ನು ಅವಲಂಬಿಸಿ ಕೆಲವು ಪ್ರಾದೇಶಿಕ ರಜಾದಿನಗಳೊಂದಿಗೆ ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

ಫೆಬ್ರವರಿ 2023 ರಲ್ಲಿ ಬ್ಯಾಂಕ್ ರಜಾದಿನಗಳು

ಫೆಬ್ರವರಿ 5 – ಭಾನುವಾರ

ಫೆಬ್ರವರಿ 11 – ಎರಡನೇ ಶನಿವಾರ

ಫೆಬ್ರವರಿ 12 – ಭಾನುವಾರ

ಫೆಬ್ರವರಿ 15 – ಲುಯಿ-ನ್ಗೈನಿ ಕಾರಣದಿಂದಾಗಿ ಇಂಫಾಲ್‌ನಲ್ಲಿ ಬ್ಯಾಂಕ್ ಮುಚ್ಚಿರುತ್ತದೆ

ಫೆಬ್ರವರಿ 18 – ಮಹಾಶಿವರಾತ್ರಿ ಕಾರಣ ಮುಂಬೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ರಾಯ್ಪುರ್, ರಾಂಚಿ, ಡೆಹ್ರಾಡೂನ್, ಜಮ್ಮು, ಕಾನ್ಪುರ್, ತಿರುವನಂತಪುರಂ, ಕೊಚ್ಚಿ, ಲಕ್ನೋ, ನಾಗ್ಪುರ, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಫೆಬ್ರವರಿ 19 – ಭಾನುವಾರ

ಫೆಬ್ರುವರಿ 20 – ರಾಜ್ಯ ದಿನದಂದು ಐಜ್ವಾಲ್‌ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ

ಫೆಬ್ರವರಿ 21 – ಲೋಸಾರ್‌ನಿಂದಾಗಿ ಸಿಕ್ಕಿಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ

ಫೆಬ್ರವರಿ 25 – ನಾಲ್ಕನೇ ಶನಿವಾರ

ಫೆಬ್ರವರಿ 26 – ಭಾನುವಾರ

ಬ್ಯಾಂಕ್‌ಗಳು 10 ದಿನಗಳವರೆಗೆ ಮುಚ್ಚಲ್ಪಡುತ್ತವೆಯಾದರೂ, ಆನ್‌ಲೈನ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಯಾವುದೇ ಅನನುಕೂಲತೆಯಿಲ್ಲದೆ ಇಂಟರ್ನೆಟ್ ಸೇವೆಗಳನ್ನು ಗ್ರಾಹಕರು ಪಡೆಯಬಹುದು. ಆದರೆ ಭೌತಿಕವಾಗಿ ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿ ಮಾಡಲು ಮತ್ತು ಹಿಂಪಡೆಯಲು ಸಾಧ್ಯವಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...