ನ್ಯೂಯಾರ್ಕ್: ಬ್ಯಾಂಕ್ ದರೋಡೆ ಮಾಡಲು ಊಬರ್ ಕ್ಯಾಬ್ ಬಳಸಿದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಅಮೆರಿಕದ ಮಿಚಿಗನ್ ಸೌತ್‌ಫೀಲ್ಡ್‌ನಲ್ಲಿ.
42 ವರ್ಷದ ವ್ಯಕ್ತಿಯೊಬ್ಬ ಹಂಟಿಂಗ್ಟನ್ ಬ್ಯಾಂಕ್ ಅನ್ನು ದರೋಡೆ ಮಾಡಲು ಊಬರ್ಗೆ ಬುಕ್ ಮಾಡಿದ್ದಾನೆ. ಊಬರ್ ಚಾಲಕ ಆತ ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಸ್ವಲ್ಪ ಸಮಯ ಬ್ಯಾಂಕ್ ಹೊರಗೆ ಕಾಯುವಂತೆ ಚಾಲಕನಿಗೆ ವ್ಯಕ್ತಿ ಹೇಳಿದ್ದಾನೆ. ತಾನು ಕರೆದುಕೊಂಡು ಬಂದಿರುವ ಪ್ರಯಾಣಿಕ ದರೋಡೆಗೆ ಬಂದಿರುವುದು ಎಂದು ಚಾಲಕನಿಗೆ ಎಳ್ಳಷ್ಟೂ ಸಂಶಯ ಬರಲಿಲ್ಲ.
ಕೊನೆಗೆ ಬ್ಯಾಂಕ್ ಲೂಟಿ ಮಾಡಿ ಅದೇ ಕ್ಯಾಬ್ನಲ್ಲಿ ದರೋಡೆಕೋರ ವಾಪಸ್ ಬಂದಿದ್ದಾನೆ. ದರೋಡೆಯ ವಿಷಯ ಪೊಲೀಸರಿಗೆ ತಿಳಿಯುತ್ತಲೇ ಸಿಸಿ ಟಿವಿಯನ್ನೆಲ್ಲಾ ಪರಿಶೀಲನೆ ಮಾಡಿ ಚಾಲಕನನ್ನು ಮೊದಲು ವಶಕ್ಕೆ ಪಡೆದುಕೊಂಡರು.
ನಂತರ ಆತ ದರೋಡೆಕೋರನನ್ನು ಎಲ್ಲಿಗೆ ಬಿಟ್ಟಿದ್ದೆ ಎಂದು ಹೇಳಿಕೆ ನೀಡಿದ. ಅದರ ಆಧಾರದ ಮೇಲೆ ಬೆನ್ನತ್ತಿದ್ದ ಪೊಲೀಸರ ಕೈಗೆ ದರೋಡೆಕೋರ ಕೊನೆಗೂ ಸಿಕ್ಕಿಬಿದ್ದಿದ್ದಾನೆ.