alex Certify ಬ್ಯಾಂಕುಗಳಿಗೆ ವಂಚಿಸಿದವರ ಆಸ್ತಿ ಮಾರಾಟದಿಂದ ವಸೂಲಾದ ಹಣವೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕುಗಳಿಗೆ ವಂಚಿಸಿದವರ ಆಸ್ತಿ ಮಾರಾಟದಿಂದ ವಸೂಲಾದ ಹಣವೆಷ್ಟು ಗೊತ್ತಾ…?

ವಜ್ರದ ವ್ಯಾಪಾರಿ ನೀರವ್​ ಮೋದಿ, ಮೆಹುಲ್​ ಚೋಕ್ಸಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರ ಆಸ್ತಿ ಮಾರಾಟದಿಂದ ದೇಶದ ಬ್ಯಾಂಕ್​ಗಳು ಸುಮಾರು 13,109 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಸೂಲಿ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ ಕೇಂದ್ರ ಏಜೆನ್ಸಿಯು ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಬ್ರಿಟನ್​​ನ ನ್ಯಾಯಾಲಯವು ವಿಜಯ್​ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಭಾರತೀಯ ಸ್ಟೇಟ್​ ಬ್ಯಾಂಕ್​ ನೇತೃತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟವು ಪ್ರಸ್ತುತ ನಿಷ್ಕ್ರಿಯಗೊಂಡಿರುವ ಕಿಂಗ್​ಫಿಶರ್​ ಏರ್​ಲೈನ್ಸ್​ನಿಂದ ನೀಡಬೇಕಾದ ಸಾಲವನ್ನು ಮರುಪಾವತಿ ಮಾಡಲು ವಿಶ್ವಾದ್ಯಂತ ಫ್ರೀಜಿಂಗ್​ ಆದೇಶವನ್ನು ಅನುಸರಿಸಲು ದಾರಿ ಮಾಡಿಕೊಟ್ಟಂತಾಗಿದೆ.

ಪ್ರಸ್ತುತ 65 ವರ್ಷದ ವಿಜಯ್​ ಮಲ್ಯ ಬ್ರಿಟನ್​ನಲ್ಲಿ ಜಾಮೀನಿನ ಮೇಲೆ ಉಳಿದಿದ್ದಾರೆ. ವಿಜಯ್​ ಮಲ್ಯ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೆಲ ಗೌಪ್ಯ ಕಾನೂನು ವಿಚಾರಗಳು ಪ್ರಕ್ರಿಯೆಯಲ್ಲಿದ್ದು ಅದು ಮುಗಿಯುತ್ತಿದ್ದಂತೆಯೇ ಮಲ್ಯ ಭಾರತಕ್ಕೆ ಬರುವುದು ಅನಿವಾರ್ಯವಾಗಲಿದೆ.

ವಿಜಯ್​ ಮಲ್ಯ ಬ್ಯಾಂಕ್​ಗಳ ಒಕ್ಕೂಟಕ್ಕೆ ಅಸಲು ಹಾಗೂ ಬಡ್ಡಿ ಸೇರಿ 9000 ಕೋಟಿಗೂ ಅಧಿಕ ಮೊತ್ತ ವಂಚಿಸಿದ್ದಾರೆ. ಇತ್ತ ಪಂಜಾಬ್ ನ್ಯಾಷನಲ್​ ಬ್ಯಾಂಕ್​ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾದ ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಚೋಕ್ಸಿ ಬ್ಯಾಂಕ್​ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...