ಬ್ಯಾಂಕುಗಳಲ್ಲಿ ಲಾಕರ್ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಲಾಕರ್ ಸೌಲಭ್ಯಕ್ಕೆ ಸಂಬಂಧಿಸಿದ ಪರಿಷ್ಕೃತ ಒಪ್ಪಂದಗಳಿಗೆ ಗ್ರಾಹಕರು ಸಹಿ ಮಾಡುವ ಗಡುವನ್ನು ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಜನವರಿ 1ರಿಂದಲೇ ಇದನ್ನು ಜಾರಿಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿತ್ತಾದರೂ ಆದರೆ ಇನ್ನೂ ಬಹಳಷ್ಟು ಸಂಖ್ಯೆಯ ಗ್ರಾಹಕರು ಸಹಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಈಗ ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಪರಿಷ್ಕೃತ ಒಪ್ಪಂದಗಳ ಪ್ರಕಾರ ಗ್ರಾಹಕರು ಲಾಕರ್ ನಲ್ಲಿ ಅಕ್ರಮವಾದ ಅಥವಾ ಅಪಾಯಕಾರಿಯಾದ ಯಾವುದೇ ವಸ್ತುವನ್ನು ಇರಿಸುವಂತಿಲ್ಲ. ಅಲ್ಲದೆ ಅಗ್ನಿ ಅನಾಹುತ, ಕಳ್ಳತನ, ಕಟ್ಟಡ ಕುಸಿತ ಅಥವಾ ಬ್ಯಾಂಕ್ ಸಿಬ್ಬಂದಿಯಿಂದ ವಂಚನೆ ನಡೆದ ಪ್ರಕರಣಗಳಲ್ಲಿ ಬ್ಯಾಂಕುಗಳು ಭರಿಸಬೇಕಾದ ಮೊತ್ತ ವಾರ್ಷಿಕ ಬಾಡಿಗೆ ಮೊತ್ತದ ನೂರು ಪಟ್ಟು ಮೊತ್ತಕ್ಕೆ ಸೀಮಿತವಾಗಿರುತ್ತದೆ.