ಬೈಕ್ ಸವಾರರಿಗೆ ಏಕಾಏಕಿ ಎದುರಾಯ್ತು ಸಿಂಹ..! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್ 16-02-2022 8:55AM IST / No Comments / Posted In: Latest News, India, Live News ನೀವು ಅರಣ್ಯಪ್ರದೇಶಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅದು ಕಾಡುಪ್ರಾಣಿಗಳ ನೆಲೆ ಆಗಿರೋದ್ರಿಂದ ನೀವು ಆದಷ್ಟು ಶಾಂತ ರೀತಿಯಿಂದ ವರ್ತಿಸುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಜೋರಾದ ಗದ್ದಲ, ಕಿರುಚಾಟಗಳು ಕಾಡು ಪ್ರಾಣಿಗಳ ತಾಳ್ಮೆಯನ್ನು ಕೆರಳಿಸಬಹುದು. ಕಾಡು ಪ್ರಾಣಿಗಳ ವಿರುದ್ಧ ಸೆಣಸಾಡಿ ಗೆಲ್ಲುವುದು ಅಂದುಕೊಂಡಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ ಎಂಬುದನ್ನು ಮರೆಯುವಂತಿಲ್ಲ . ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಸಿಂಹಗಳು ಎದುರಿಗೆ ಬಂದಾಗ ಯಾವ ರೀತಿಯಲ್ಲಿ ಶಾಂತರಾಗಿ ವರ್ತಿಸಬೇಕು ಎಂಬುದನ್ನು ತೋರಿಸುವಂತಿದೆ. ಎದೆ ಝಲ್ ಎನ್ನಿಸುವ ವಿಡಿಯೋದಲ್ಲಿ ಇಬ್ಬರು ಸವಾರರಿದ್ದ ಬೈಕ್ನ ಎದುರಿಗೆ ಬಂದ ಹೆಣ್ಣು ಸಿಂಹವು ಬಳಿಕ ರಸ್ತೆಯಿಂದ ಮರೆಯಾಗೋದನ್ನು ಕಾಣಬಹುದಾಗಿದೆ. ಏಕದಿನ ಸರಣಿ ಕ್ಲೀನ್ ಸ್ವೀಪ್ ಬಳಿಕ ಟಿ20 ಸರಣಿ ಶುಭಾರಂಭಕ್ಕೆ ಟೀಂ ಇಂಡಿಯಾ ಸಜ್ಜು ದ್ವಿಚಕ್ರ ವಾಹನವು ಮಣ್ಣಿನ ರಸ್ತೆಯ ಮೇಲೆ ಹೋಗುತ್ತಿದ್ದ ವೇಳೆಯಲ್ಲಿ ಏಕಾಏಕಿ ಹೆಣ್ಣು ಸಿಂಹವು ಎದುರಿಗೆ ಬಂದಿದೆ. ಸಿಂಹಿಣಿಯನ್ನು ನೋಡುತ್ತಿದ್ದಂತೆಯೇ ಗಾಡಿಯನ್ನು ನಿಲ್ಲಿಸಿದ ಇಬ್ಬರು ನಿಧಾನವಾಗಿ ಮಾತನಾಡಿದ್ದಾರೆ. ಸಿಂಹಿಣಿಯು ಸ್ವಲ್ಪವೇ ದೂರದಿಂದ ಗದ್ದೆಯನ್ನು ದಾಟಿ ಪಾರಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಸುಸಾಂತ ನಂದಾ ಹಳ್ಳಿಯ ರಸ್ತೆಗಳಲ್ಲಿ ಸಹಪ್ರಯಾಣಿಕರು. ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Co travellers on a Village road. Happens in India😊 pic.twitter.com/XQKtOcEstF — Susanta Nanda (@susantananda3) February 14, 2022