
ವ್ಯಕ್ತಿಯೊಬ್ಬರು ಬಿದ್ದಿರುವುದಾಗಿ ಕ್ಯಾಲಿಫೋರ್ನಿಯಾದ ಹರ್ಮೋಸಾ ಬೀಚ್ ಪೊಲೀಸರಿಗೆ ವಾಚ್ ಸಂದೇಶ ರವಾನಿಸಿದೆ. ಸ್ಥಳದ ಆಧಾರದ ಮೇಲೆ ಇಲಾಖೆಯು ಕೂಡಲೇ ತುರ್ತು ಸೇವೆಗಳನ್ನು ಆದೇಶಿಸಿದೆ. ಜನವರಿ 22 ರಂದು ಈ ಘಟನೆಯು ಸಂಭವಿಸಿದೆ.
ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದಾಗ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಹಾಗೂ ಆತನ ತಲೆಯಿಂದ ತೀವ್ರವಾಗಿ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲವು ದಿನಗಳ ಚಿಕಿತ್ಸೆಯ ನಂತರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವ್ಯಕ್ತಿಯು ಬಿದ್ದ ಕೂಡಲೇ ಆಪಲ್ ವಾಚ್ ತುರ್ತಾಗಿ ಸಂದೇಶ ರವಾನಿಸಿದ್ದರಿಂದ ವ್ಯಕ್ತಿಯ ಜೀವ ಉಳಿಯುವಲ್ಲಿ ಯಶಸ್ವಿಯಾಗಿದೆ. ಇಲ್ಲದಿದ್ದಲ್ಲಿ ಬಹುಶಃ ವಿಪರೀತ ರಕ್ತಸ್ರಾವದಿಂದ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ದಟ್ಟವಾಗಿತ್ತು.