ಬೈಕ್ ಹಾರನ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆಯು ಬಿ.ಸಿ. ರೋಡಿನ ಶಾಂತಿಯಂಗಡಿ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.
ಮಹಮ್ಮದ್ ಆಸಿಫ್ ಎಂಬಾತನನ್ನು ಮಹಮ್ಮದ್ ನೌಫೆಲ್ ಹಾಗೂ ಮಹಮ್ಮದ್ ನೌಸೀರ್ ಕೊಲೆ ಮಾಡಿದ್ದು ಇವರನ್ನು ವಶಕ್ಕೆ ಪಡೆದಿರುವ ಬಂಟ್ವಾಳ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ತಡರಾತ್ರಿ ಪೊನ್ನೋಡಿಯ ಹೋಟೆಲ್ ಎದುರು ಪದೇ ಪದೇ ಹಾರ್ನ್ ಹಾಕುತ್ತಾನೆ ಎಂಬ ಕಾರಣಕ್ಕೆ ಮಹಮ್ಮದ್ ಆಸಿಫ್ ವಿರುದ್ಧ ಮಹಮ್ಮದ್ ನೌಫೆಲ್ ಹಾಗೂ ಮಹಮ್ಮದ್ ನೌಸಿರ್ ಸಿಟ್ಟಿಗೆದ್ದಿದ್ದರು. ಈ ಸಿಟ್ಟು ಅತಿರೇಖಕ್ಕೆ ತಿರುಗಿದ ಪರಿಣಾಮ ನೌಫೆಲ್ ಹಾಗೂ ನೌಸಿರ್ ಆಸಿಫ್ನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾರೆ.
ಈ ಸಂಬಂಧ ಶಾಂತಿಯಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.