ಕೊರೊನಾ ಸಾಂಕ್ರಾಮಿಕದ ಜಗತ್ತಿಗೆ ಹೊಂದಿಕೊಂಡ ಕೆಲವೇ ಮೋಟಾರ್ ಸೈಕಲ್ ತಯಾರಕ ಕಂಪನಿಗಳಲ್ಲಿ ಡುಕಾಟಿ ಒಂದಾಗಿದೆ. ಪ್ರತಿಷ್ಠಿತ ಡುಕಾಟಿ ಕಂಪನಿಯು ಮಾರ್ಚ್ 10ರ ಒಳಗಾಗಿ ಮೂರು ಹೊಸ ಮೋಟಾರ್ ಸೈಕಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಮೂರು ಹೊಸ ಮೋಟಾರ್ ಸೈಕಲ್ಗಳಲ್ಲಿ ಒಂದು ನಾಳೆ ಅಂದರೆ ಗುರುವಾರ ಪ್ರದರ್ಶಿಸುವ ನಿರೀಕ್ಷೆಯಿದೆ. ಇದು ಡಯಾವೆಲ್ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನೆರಡು Panigale V4 R ಅಥವಾ Panigale V4 SP2 ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಅದರ ಹಿಂದಿನ ವರ್ಲ್ಡ್ ಪ್ರೀಮಿಯರ್ ಸರಣಿಯಿಂದ ಹೈಪರ್ ಮೊಟಾರ್ಡ್, ಮಾನ್ಸ್ಟರ್ ಮತ್ತು ಸೂಪರ್ಸ್ಪೋರ್ಟ್ 950 ಕಾಣೆಯಾಗಿದೆ, ಈ ಮಾಡೆಲ್ಗಳನ್ನು ನವೀಕೃತಗೊಳಿಸಿ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆಯೇ ಡುಕಾತಿಯ ಈ ವರ್ಷದ ಮೊದಲ ಬೈಕ್ ಮಾರುಕಟ್ಟೆಗೆ ಬರುತ್ತಿರೋದ್ರಿಂದ ನಾವು ಇನ್ನು ಹೆಚ್ಚು ಸಮಯಗಳ ಕಾಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ..! ಅಲ್ಲದೇ ಭಾರತದಲ್ಲಿ ಈ ವರ್ಷದಲ್ಲಿಯೇ ಈ ಎಲ್ಲಾ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.