
ಶನಿವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬೇಸ್ಬಾಲ್ ಆಟಕ್ಕೆ ಅಳಿಲು ಅಡ್ಡಿಪಡಿಸಿದೆ. ಕೊಲಂಬಸ್ ಕ್ಲಿಪ್ಪರ್ಸ್ ಮತ್ತು ಬಫಲೋ ಬೈಸನ್ಸ್ ನಡುವಿನ ಬೇಸ್ಬಾಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಆಟಕ್ಕೆ ಅಳಿಲು ಅಡ್ಡಿಪಡಿಸಿದ ನಂತರ ಹಲವಾರು ನಿಮಿಷಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಮೈನರ್ ಲೀಗ್ ಬೇಸ್ಬಾಲ್ನ ಅಧಿಕೃತ ಪುಟದಿಂದ ಹಂಚಿಕೊಂಡ ವಿಡಿಯೋದಲ್ಲಿ, ಪ್ರೇಕ್ಷಕರು ಆಶ್ಚರ್ಯದಿಂದ ನೋಡುತ್ತಿರುವಂತೆ ಅಳಿಲು ಮೈದಾನ ಪ್ರವೇಶಿಸಿದೆ. ಅದನ್ನು ಹಿಡಿಯಲು ಆಟಗಾರರು ಮತ್ತು ಗ್ರೌಂಡ್ ಕೀಪರ್ಗಳು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಗ್ರೌಂಡ್ ಕೀಪರ್ಗಳು ಬಲೆ ಮತ್ತು ಬಕೆಟ್ಗಳನ್ನು ಬಳಸಿ ಅಳಿಲು ಹಿಡಿಯಬೇಕಾದ್ರೆ ಅವರು ಅಬ್ಬಾ.. ಅಂತೂ ಸಿಕ್ತು ಅನ್ನೋ ನಿಟ್ಟುಸಿರುಬಿಟ್ಟಿದ್ದಾರೆ. ಮೈದಾನದ ತುಂಬಾ ಓಡಾಡಿದ ಅಳಿಲು ಬಲೆಗೆ ಬೀಳುವಲ್ಲಿ ಯಶಸ್ವಿಯಾಯಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಗೆ ಮನರಂಜನೆ ನೀಡಿದೆ.