ಒಂದು ಕಪ್ ಹಾಲು
2 ಮಾವಿನ ಹಣ್ಣಿನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪ್ಯೂರಿ ಮಾಡಿಕೊಳ್ಳಬೇಕು
ಒಂದು ಕಪ್ ಕಂಡೆನ್ಸ್ಡ್ ಮಿಲ್ಕ್
ಒಂದು ಕಪ್ ಫ್ರೆಶ್ ಕ್ರೀಂ
2 ಟೇಬಲ್ ಸ್ಪೂನ್ ಸ್ಪೂನ್ ಕೇಸರಿ ಮಿಶ್ರಿತ ಹಾಲು
ಸಕ್ಕರೆ 2 ಸ್ಪೂನ್
ಮಾಡುವ ವಿಧಾನ
ಒಂದು ಬೌಲ್ಗೆ ಫ್ರೆಶ್ ಕ್ರೀಂ ಗೆ ಹಾಕಿಕೊಳ್ಳಬೇಕು. ನಂತರ ಕಂಡೆನ್ಸ್ಡ್ ಮಿಲ್ಕ್, ಸಕ್ಕರೆ ಪುಡಿ ಸೇರಿಸಿ ಮಿಕ್ಸಿ ಅಥವಾ ಬ್ಲೆಂಡರ್ನಲ್ಲಿ ಬ್ಲೆಂಡ್ ಮಾಡಿಕೊಳ್ಳಬೇಕು. ಸ್ವಲ್ಪ ಗಟ್ಟಿ ಹದಕ್ಕೆ ಬರುವ ತನಕ ಬ್ಲೆಂಡ್ ಮಾಡಿಕೊಳ್ಳಬೇಕು.
ಈಗ ಇದಕ್ಕೆ ಹಾಲು ಮತ್ತು ಮಾವಿನ ಪ್ಯೂರಿ, ಕೇಸರಿ ಹಾಲು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ. 5 ರಿಂದ 10 ನಿಮಿಷ ಬ್ಲೆಂಡ್ ಆದ ಮೇಲೆ ಇದನ್ನು ಕುಲ್ಫಿ ಮೌಲ್ಡ್ ಗೆ ಹಾಕಿಕೊಳ್ಳಬೇಕು.
ಮೌಲ್ಡ್ ಇಲ್ಲವೇ ಲೋಟಕ್ಕೆ ಐಸ್ ಕ್ರೀಂ ಸ್ಟಿಕ್ ಹಾಕಿಕೊಂಡು ಕುಲ್ಫಿ ಮಿಶ್ರಣ ಫಿಲ್ ಮಾಡಬೇಕು. ಈ ಕುಲ್ಫಿಗಳನ್ನು 12 ಗಂಟೆಗಳ ಕಾಲ ಫ್ರೀಜರ್ನಲ್ಲಿಡಬೇಕು.
ನಂತರ ಒಂದು ಬೌಲ್ಗೆ ನೀರು ಹಾಕಿ ಕುಲ್ಫಿ ಮೌಲ್ಡ್ ಇಟ್ಟು ಕುಲ್ಫಿಯನ್ನು ತೆಗೆಯಬಹುದು. ಇಷ್ಟಾದ್ರೆ ಕೂಲ್ ಕೂಲ್ ಮಾವಿನ ಹಣ್ಣಿನ ಕುಲ್ಫಿ ಸವಿಯಲು ಸಿದ್ಧ.