1 ಲೀಟರ್ – ಹಾಲು, 15 – 20 ಕೇಸರಿ ದಳ (ಸ್ವಲ್ಪ ಹಾಲಿನಲ್ಲಿ ನೆನೆಸಿಡಿ), 20 – ಬಾದಾಮಿ, ¼ ಕಪ್ – ಸಕ್ಕರೆ, ಏಲಕ್ಕಿ ಪುಡಿ – 1/2 ಟೀ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಬಾದಾಮಿಯನ್ನು ½ ಗಂಟೆ ಹೊತ್ತು ನೀರಿನಲ್ಲಿ ನೆನೆಸಿಡಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ¼ ಕಪ್ ಹಾಲು ಹಾಕಿ ರುಬ್ಬಿಕೊಳ್ಳಿ.
ನಂತರ ಒಂದು ದಪ್ಪ ತಳದ ಪಾತ್ರೆಗೆ ಹಾಲು ಹಾಕಿ ಹಾಲು ಕುದಿಯಲು ಆರಂಭಿಸಿದಾಗ ಅದಕ್ಕೆ ರುಬ್ಬಿದ ಬಾದಾಮಿ ಹಾಕಿ ನಂತರ ನೆನೆಸಿಟ್ಟುಕೊಂಡ ಕೇಸರಿದಳ ಸೇರಿಸಿ.
25 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸಕ್ಕರೆ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ತಣ್ಣಗಾದ ನಂತರ ಫ್ರಿಡ್ಜ್ ನಲ್ಲಿಡಿ ನಂತರ ಸರ್ವ್ ಮಾಡಿ.