ಗಿಡ ಮೂಲಿಕೆಗಳು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲೂ ಬೇಸಿಗೆಯಲ್ಲಿ ವರದಾನವಾಗಿ ಇರುವುದೇ ಲಾವಂಚದ ಬೇರು.
ಯಾವುದೇ ಗ್ರಂಧಿಗೆ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಲಾವಂಚದ ಬೇರಿನಿಂದ ಎಷ್ಟೆಲ್ಲಾ ಪ್ರಯೋಜನಗಳು ಇದೆ ಗೊತ್ತಾ?
ಪಾದಗಳ ಉರಿ, ಬಾಯಿ ಹುಣ್ಣು, ಉರಿ ಮೂತ್ರ, ಮೊಡವೆಗಳು ಮುಂತಾದ ಅನೇಕ ಬಗೆಯ ಸಮಸ್ಯೆಗಳಿಗೆ ಲಾವಂಚ ರಾಮಬಾಣ.
ತಂಪಿನ ಗುಣ ಹೊಂದಿರುವ ಲಾವಂಚದ ಬೇರನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಸೋಸಿ ಕುಡಿಯಬಹುದು.
ಲಾವಂಚ ಬೇರಿನ ಪುಡಿಯನ್ನು ನೀರಿನಲ್ಲಿ ಕುದಿಸಿ, ಶೋಧಿಸಿಯೂ ಕುಡಿಯಬಹುದು.
ಬೇಸಿಗೆಯಲ್ಲಿ ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಆಯಾಸ, ಬಳಲಿಕೆ ಸಹ ಮಾಯವಾಗುತ್ತದೆ.