alex Certify ಬೇಸಿಗೆಯಲ್ಲಿ ಮಾವಿನ ಹಣ್ಣು ತಿಂದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಇರಬಹುದು ದೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಮಾವಿನ ಹಣ್ಣು ತಿಂದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಇರಬಹುದು ದೂರ

ಬೇಸಿಗೆ ಕಾಲದಲ್ಲಿ ಸೆಖೆ ತಡೆದುಕೊಳ್ಳೋದು ಬಹಳ ಕಷ್ಟ. ಜೊತೆಗೆ ಬೆವರಿನ ಕಿರಿಕಿರಿ ಬೇರೆ. ಆದ್ರೂ ಜನ ಈ ಸೀಸನ್‌ಗಾಗಿ ಕಾದು ಕೂರುತ್ತಾರೆ. ಯಾಕೆ ಗೊತ್ತಾ? ಮಾವಿನ ಹಣ್ಣುಗಳನ್ನು ಸವಿಯೋದಕ್ಕಾಗಿ.

ರಸಭರಿತ ಸಿಹಿ ಮಾವಿನ ಹಣ್ಣುಗಳು ಸಿಗೋದು ಬೇಸಿಗೆಯಲ್ಲಿ ಮಾತ್ರ. ಮಾವಿನ ಹಣ್ಣಿನಲ್ಲಿ ವಿಟಮಿನ್-ಸಿ ಪ್ರಮಾಣ ಅಧಿಕವಾಗಿದೆ. ಮಾಗಿದ ಹಣ್ಣುಗಳಲ್ಲಿ ವಿಟಮಿನ್‌ ಎ ಕೂಡ ಇರುತ್ತದೆ.

ಇದರ ವೈಜ್ಞಾನಿಕ ಹೆಸರು Mangifera indica. ಭಾರತ ಮಾವಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನ ರಾಷ್ಟ್ರೀಯ ಹಣ್ಣು ಮಾವು. ಮಾವಿನ ಹಣ್ಣಿನಲ್ಲಿ 100ಕ್ಕೂ ಹೆಚ್ಚು ವಿಧಗಳಿವೆ. ಮಾವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಇದರಲ್ಲಿ ಜೈವಿಕ ಸಕ್ರಿಯ ಸಂಯುಕ್ತಗಳಿವೆ. ಹೆಚ್ಚಿನ ಪ್ರಮಾಣದ ಬೀಟಾಕರೋಟಿನ್ ಇರುವುದರಿಂದ ಮಾವು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಮಾವಿನ ತಿರುಳಿನಲ್ಲಿ ಕ್ಯಾರೊಟಿನಾಯ್ಡ್‌ಗಳು, ಆಸ್ಕೋರ್ಬಿಕ್ ಆಮ್ಲ, ಟೆರ್ಪಿನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಅಂಶಗಳಿವೆ. ಇದು ಕ್ಯಾನ್ಸರ್‌ನಂತಹ ಪ್ರಮುಖ ಕಾಯಿಲೆಗಳನ್ನು ತೊಡೆದುಹಾಕುವ ಶಕ್ತಿಯನ್ನು ಹೊಂದಿದೆ.

ಮಾವಿನ ಹಣ್ಣು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಮಾವಿನ ಹಣ್ಣು ತಿನ್ನುವುದರಿಂದ ಹೃದಯವು ಫಿಟ್ ಆಗಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾವು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್-ಸಿ ಹೇರಳವಾಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಮುಂಚೆಯೇ ದೃಷ್ಟಿ ಸಮಸ್ಯೆ ಸಾಮಾನ್ಯವಾಗಿದೆ, ಇದಕ್ಕೆ ಕಾರಣ ವಿಟಮಿನ್-ಎ ಕೊರತೆ. ಮಾವಿನ ಹಣ್ಣುಗಳಲ್ಲಿ ವಿಟಮಿನ್‌ ಎ ಇರುವುದರಿಂದ ಕಣ್ಣಿನ ಸಮಸ್ಯೆಗಳಿಗೂ ಇದು ಪರಿಹಾರ ನೀಡಬಲ್ಲದು.

ದೃಷ್ಟಿ ಕಡಿಮೆ ಇರುವವರು ಅಥವಾ ಕಣ್ಣಿನ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬೇಕು. ಬೇಸಿಗೆಯಲ್ಲಿ ಬಿಸಿ ಗಾಳಿ ಅಥವಾ ಶಾಖದ ಅಲೆಯಿಂದ ರಕ್ಷಿಸುವಲ್ಲಿ ಮಾವು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಮಾವಿನ ರಸವನ್ನು ಸಹ ಕುಡಿಯಬಹುದು. ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೇವನೆ ಅತ್ಯಂತ ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...