alex Certify ಬೇಸಿಗೆಯಲ್ಲಿ ಪುದೀನಾ ಎಲೆಗಳಿಂದ ಇದೆ ಇಷ್ಟೆಲ್ಲಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಪುದೀನಾ ಎಲೆಗಳಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ದೇಶದ ಕೆಲವೆಡೆ ತಾಪಮಾನ 45 ಡಿಗ್ರಿಯ ಸನಿಹಕ್ಕೆ ಹೋಗಿದೆ. ಪರಿಣಾಮ ವಿಪರೀತ ಸೆಖೆ, ಸುಸ್ತು ತಾಳಲಾಗದೆ ಜನರು ಕಂಗಾಲಾಗಿದ್ದಾರೆ. ಈ ಬಿರು ಬೇಸಿಗೆಯಲ್ಲಿ ಕೆಲವೊಂದು ಪದಾರ್ಥಗಳ ನಿಯಮಿತ ಸೇವನೆಯಿಂದ ನಿಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು. ಪುದೀನಾ ಸೊಪ್ಪು ಕೂಡ ಅವುಗಳಲ್ಲೊಂದು. ಔಷಧಿಗಿಂತ ಯಾವುದಕ್ಕೂ ಕಡಿಮೆಯಿಲ್ಲದ ಪುದೀನಾದಲ್ಲಿ ವಿಟಮಿನ್-ಸಿ ಮತ್ತು ಖನಿಜಗಳು ಹೇರಳವಾಗಿವೆ.

ಬೇಸಿಗೆಯಲ್ಲಿ ಪುದೀನಾ ಸೊಪ್ಪಿನ ಸೇವನೆಯಿಂದ ಚರ್ಮವು ಶಕ್ತಿಯನ್ನು ಪಡೆಯುತ್ತದೆ. ಅದಕ್ಕಾಗಿಯೇ ಪುದೀನಾ ಎಲೆಗಳನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಪುದೀನಾ ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ತ್ವಚೆಯಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ನಿಮಗೆ ಜೀರ್ಣಕ್ರಿಯೆಯ ಸಮಸ್ಯೆಗಳಿದ್ದರೆ ಪುದೀನಾ ಸೇವಿಸಿ.

ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು, ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಒಂದು ಕಪ್ ನೀರನ್ನು ಲಘುವಾಗಿ ಬಿಸಿ ಮಾಡಿ ಅದಕ್ಕೆ ಅರ್ಧ ಚಮಚ ಪುದೀನಾ ರಸವನ್ನು ಬೆರೆಸಿ ಕುಡಿಯಿರಿ. ವಾತಾವರಣ ಬದಲಾದಂತೆ ಶೀತ, ಕೆಮ್ಮಿನ ಸಮಸ್ಯೆ ಕೂಡ ಶುರುವಾಗುತ್ತದೆ. ಈ ಸಮಸ್ಯೆಗಳಿದ್ದರೆ ಪುದೀನ ಎಲೆಗಳನ್ನು ಸೇವಿಸಿ.

ನಿಮಗೆ ಗಂಟಲು ನೋವು ಇದ್ದರೆ ಪುದೀನಾ ಕಷಾಯವನ್ನು ಕುಡಿಯಿರಿ. ಮೂಗು ಕಟ್ಟಿದ್ದರೆ ಪುದೀನಾ ಎಲೆಗಳ ವಾಸನೆಯನ್ನು ತೆಗೆದುಕೊಳ್ಳಿ. ಪುದೀನಾದಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇದನ್ನು ಸೇವಿಸುವುದರಿಂದ ಹೆಚ್ಚುವರಿ ಕ್ಯಾಲೊರಿಗಳು ದೇಹವನ್ನು ಸೇರುವುದಿಲ್ಲ. ನಿಮ್ಮ ತೂಕವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಪುದೀನಾ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಪುದೀನ ಎಲೆಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿವೆ. ಒತ್ತಡದಿಂದಾಗಿ ಉದ್ಭವಿಸುವ ಅನೇಕ ಸಮಸ್ಯೆಗಳು ಪುದೀನಾ ಸೇವನೆಯಿಂದ ಪರಿಹಾರವಾಗುತ್ತವೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುವ ಶಕ್ತಿ ಪುದೀನಾಕ್ಕಿದೆ. ನಾವು ದೀರ್ಘಕಾಲದವರೆಗೆ ಬಾಯಿಯನ್ನು ಸ್ವಚ್ಛಗೊಳಿಸದಿದ್ದರೆ ದುರ್ವಾಸನೆ ಪ್ರಾರಂಭವಾಗುತ್ತದೆ. ಈ ಸಮಸ್ಯೆ ಬಂದಾಗಲೆಲ್ಲ ಒಂದಿಷ್ಟು ಪುದೀನಾ ಎಲೆಗಳನ್ನು ಜಗಿಯಿರಿ.

ಬೇಸಿಗೆಯಲ್ಲಿ ತೀವ್ರವಾದ ತಲೆನೋವಿನಿಂದ ಬಳಲುವವರಿಗೆ ಪುದೀನಾದಿಂದ ಮಾಡಿದ ವಸ್ತುಗಳು ಪರಿಹಾರವನ್ನು ನೀಡುತ್ತವೆ. ಪುದೀನಾ ಎಣ್ಣೆ ಅಥವಾ ಅದರಿಂದ ತಯಾರಿಸಿದ ಮುಲಾಮನ್ನು ತಲೆಗೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...