alex Certify ಬೇಸಿಗೆಯಲ್ಲಿ ತಿನ್ನಲೇಬೇಕು ಈ ಆರೋಗ್ಯಕರ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ತಿನ್ನಲೇಬೇಕು ಈ ಆರೋಗ್ಯಕರ ಹಣ್ಣು

ಸಪೋಟಾ ಹಣ್ಣನ್ನು ಇಷ್ಟಪಡದಿರುವವರು ಯಾರೂ ಇಲ್ಲ. ಇದರಲ್ಲಿ ಅನೇಕ ವಿಧವಾದ ಗುಣಗಳು ಅಡಗಿವೆ. ಇದರಲ್ಲಿ ಪ್ರಕ್ಟೋಸ್, ಸುಕ್ರೋಸ್, ಸಕ್ಕರೆ ಅಂಶ ಸಮೃದ್ದಿಯಾಗಿದೆ.

* ರಕ್ತಹೀನತೆಯಿಂದ ಬಳಲುತ್ತಿರುವವರು ಸಪೋಟಾವನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

* ಸಪೋಟಾ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೃಷ್ಟಿ ದೋಷಗಳು ಸಹ ದೂರವಾಗುತ್ತದೆ.

* ಪ್ರತಿ ದಿನ ಒಂದು ಸಪೋಟಾವನ್ನು ತಿನ್ನುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಶ್ವಾಸಕೋಶಕ್ಕೂ ಒಳ್ಳೆಯದು.

* ಸಪೋಟಾದಲ್ಲಿ ರಕ್ತವೃದ್ಧಿ, ಪುಷ್ಠಿಯನ್ನು ನೀಡುವ ಅಂಶಗಳಲ್ಲದೆ ಎಷ್ಟೋ ಔಷಧೀಯ ಗುಣಗಳು ಇವೆ.

* ಅಷ್ಟೇ ಅಲ್ಲದೆ ಸಪೋಟಾದಲ್ಲಿ ಶರೀರಕ್ಕೆ ಅಗತ್ಯವಿರುವ ವಿಟಮಿನ್‌, ಖನಿಜ, ನಾರಿನಂಶ, ಕ್ಯಾಲ್ಸಿಯಂ, ಕೆರೊಟನಾಯ್ಡ್, ಪ್ರೊಟೀನ್‌, ಕಾರ್ಬೋಹೈಡ್ರೇಟ್‌, ಫಾಸ್ಪರಸ್ ಸಮೃದ್ಧಿಯಾಗಿದೆ.

* ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಸ್ ಗುಣಗಳು ಕೂಡಾ ಇದರಲ್ಲಿ ಹೆಚ್ಚಾಗಿವೆ.

* ಸಪೋಟಾದಲ್ಲಿ ವಿಟಮಿನ್ – ಎ, ವಿಟಮಿನ್ – ಸಿ ಹೆಚ್ಚಾಗಿರುವುದರಿಂದ ಶರೀರಕ್ಕೆ ಆ್ಯಂಟಿ ಆಕ್ಸಿಡೆಂಟ್‌ಗಳು ಲಭಿಸುತ್ತವೆ.

* ಸಪೋಟಾ ಮಲಬದ್ದತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

* ಗರ್ಭಿಣಿಯರು, ವೃದ್ಧರು ಪ್ರತಿದಿನ ಸಪೋಟಾ ಹಣ್ಣನ್ನು ತಿಂದರೆ ಶರೀರಕ್ಕೆ ಅಗತ್ಯವಿರುವ ಕಬ್ಬಿಣಾಂಶ ದೊರಕುತ್ತದೆ.

* ಇದರಲ್ಲಿರುವ ಪೋಟಾಷಿಯಂ, ಮೆಗ್ನೀಷಿಯಂ ಹೃದಯಕ್ಕೂ ಸಹ ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...