ಸಪೋಟಾ ಹಣ್ಣನ್ನು ಇಷ್ಟಪಡದಿರುವವರು ಯಾರೂ ಇಲ್ಲ. ಇದರಲ್ಲಿ ಅನೇಕ ವಿಧವಾದ ಗುಣಗಳು ಅಡಗಿವೆ. ಇದರಲ್ಲಿ ಪ್ರಕ್ಟೋಸ್, ಸುಕ್ರೋಸ್, ಸಕ್ಕರೆ ಅಂಶ ಸಮೃದ್ದಿಯಾಗಿದೆ.
* ರಕ್ತಹೀನತೆಯಿಂದ ಬಳಲುತ್ತಿರುವವರು ಸಪೋಟಾವನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
* ಸಪೋಟಾ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೃಷ್ಟಿ ದೋಷಗಳು ಸಹ ದೂರವಾಗುತ್ತದೆ.
* ಪ್ರತಿ ದಿನ ಒಂದು ಸಪೋಟಾವನ್ನು ತಿನ್ನುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಶ್ವಾಸಕೋಶಕ್ಕೂ ಒಳ್ಳೆಯದು.
* ಸಪೋಟಾದಲ್ಲಿ ರಕ್ತವೃದ್ಧಿ, ಪುಷ್ಠಿಯನ್ನು ನೀಡುವ ಅಂಶಗಳಲ್ಲದೆ ಎಷ್ಟೋ ಔಷಧೀಯ ಗುಣಗಳು ಇವೆ.
* ಅಷ್ಟೇ ಅಲ್ಲದೆ ಸಪೋಟಾದಲ್ಲಿ ಶರೀರಕ್ಕೆ ಅಗತ್ಯವಿರುವ ವಿಟಮಿನ್, ಖನಿಜ, ನಾರಿನಂಶ, ಕ್ಯಾಲ್ಸಿಯಂ, ಕೆರೊಟನಾಯ್ಡ್, ಪ್ರೊಟೀನ್, ಕಾರ್ಬೋಹೈಡ್ರೇಟ್, ಫಾಸ್ಪರಸ್ ಸಮೃದ್ಧಿಯಾಗಿದೆ.
* ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಸ್ ಗುಣಗಳು ಕೂಡಾ ಇದರಲ್ಲಿ ಹೆಚ್ಚಾಗಿವೆ.
* ಸಪೋಟಾದಲ್ಲಿ ವಿಟಮಿನ್ – ಎ, ವಿಟಮಿನ್ – ಸಿ ಹೆಚ್ಚಾಗಿರುವುದರಿಂದ ಶರೀರಕ್ಕೆ ಆ್ಯಂಟಿ ಆಕ್ಸಿಡೆಂಟ್‌ಗಳು ಲಭಿಸುತ್ತವೆ.
* ಸಪೋಟಾ ಮಲಬದ್ದತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
* ಗರ್ಭಿಣಿಯರು, ವೃದ್ಧರು ಪ್ರತಿದಿನ ಸಪೋಟಾ ಹಣ್ಣನ್ನು ತಿಂದರೆ ಶರೀರಕ್ಕೆ ಅಗತ್ಯವಿರುವ ಕಬ್ಬಿಣಾಂಶ ದೊರಕುತ್ತದೆ.
* ಇದರಲ್ಲಿರುವ ಪೋಟಾಷಿಯಂ, ಮೆಗ್ನೀಷಿಯಂ ಹೃದಯಕ್ಕೂ ಸಹ ಒಳ್ಳೆಯದು.