alex Certify ಬೇಸಿಗೆಗೆ ತಂಪಾದ ಮತ್ತು ಪ್ರೊಟೀನ್‌ ಯುಕ್ತ ಹಾಲುಬಾಯಿ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಗೆ ತಂಪಾದ ಮತ್ತು ಪ್ರೊಟೀನ್‌ ಯುಕ್ತ ಹಾಲುಬಾಯಿ ಮಾಡುವ ವಿಧಾನ

ಮಕ್ಕಳು ಪರೀಕ್ಷೆಯನ್ನು ಮುಗಿಸಿ ಮನೆಯಲ್ಲಿ ರಜೆಯ ಮೂಡ್ ನಲ್ಲಿದ್ದಾರೆ ಆಟ ಆಡಿ ಬಂದ ಮಕ್ಕಳಿಗೆ ಸಂಜೆ ಜಂಕ್ ಫುಡ್ ನ ಬದಲಾಗಿ ಪೌಷ್ಟಿಕಾಂಶಯುಕ್ತ ಹಾಲುಬಾಯಿಯನ್ನು ನೀಡಿದರೆ ಬಾಯಿಗೂ ರುಚಿ ಹಾಗೂ ದೇಹಕ್ಕೂ ತಂಪು. ರಾಗಿ ಎಂದರೆ ಮೂಗುಮುರಿಯುವ ಮಕ್ಕಳಿಗೆ ಈ ಹಾಲು ಬಾಯಿಯನ್ನು ನೀಡಿದರೆ ಅಗತ್ಯ ಪೌಷ್ಟಿಕಾಂಶಗಳು ದೊರೆಯುತ್ತದೆ.

ಬೇಕಾಗುವ ಸಾಮಗ್ರಿಗಳು

ಒಂದು ಕಪ್ ರಾಗಿ, ಒಂದು ಕಪ್ ಗೋಧಿ, 1 ಕಪ್ ಅಕ್ಕಿ, ಒಂದು ತೆಂಗಿನ ಕಾಯಿ ಮೂರುವರೆ ಕಪ್ ಬೆಲ್ಲ, ಒಣಕೊಬ್ಬರಿ, ಗಸಗಸೆ

ತಯಾರಿಸುವ ವಿಧಾನ

ರಾಗಿ, ಗೋಧಿ ಮತ್ತು ಅಕ್ಕಿಯನ್ನು ಬೇರೆಬೇರೆಯಾಗಿ 8 ಗಂಟೆಗಳ ಕಾಲ ನೆನೆಸಿಡಬೇಕು ಮೊದಲಿಗೆ ನೆನೆಸಿಟ್ಟ ಅಕ್ಕಿ ಮತ್ತು ತೆಂಗಿನಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ದಪ್ಪ ತಳದ ಪಾತ್ರೆಗೆ ಹಾಕಿಕೊಳ್ಳಬೇಕು ನಂತರ ಗೋಧಿ ಮತ್ತು ರಾಗಿಯನ್ನು ರುಬ್ಬಿ ಸಣ್ಣ ಕಣ್ಣಿನ ಜರಡಿಯಲ್ಲಿ ಸೋಸಿಕೊಳ್ಳಬೇಕು. ಈ ವಿಧಾನವನ್ನು ಎರಡು ಮೂರು ಬಾರಿ ಪುನರಾವರ್ತಿಸಬೇಕು. ನಂತರ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕರಗಿಸಿಕೊಂಡು ಈ ಮಿಶ್ರಣಕ್ಕೆ ಸೋಸಿಕೊಳ್ಳಿ.

ಎಲ್ಲವನ್ನು ಕಲಸಿ ಸಣ್ಣ ಉರಿಯಲ್ಲಿ ಕೈಬಿಡದೆ ಕೆದಕಬೇಕು ನಂತರ ಈ ಮಿಶ್ರಣ ಗಟ್ಟಿಯಾಗುತ್ತ ತಳಬಿಟ್ಟು ಬರುತ್ತದೆ. ಇದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ಮೇಲೆ ಒಣಕೊಬ್ಬರಿ ಮತ್ತು ಗಸಗಸೆ ಮಿಶ್ರಣವನ್ನು ಉದುರಿಸಿ ತಣ್ಣಗಾದ ನಂತರ ಕತ್ತರಿಸಿ ಸವಿಯಿರಿ.

ಬೇಸಿಗೆಯಲ್ಲಿ ‘ಕುಲು’ ಗೆ ಭೇಟಿ ನೀಡಲೇಬೇಕು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...