ನಿಮ್ಮ ಮನೆಯಲ್ಲಿ ಇರುವ ಬೆಳ್ಳಿಯ ದೇವರ ಸಾಮಾನುಗಳು ಬಣ್ಣ ಕಳೆದುಕೊಂಡಿದೆಯೇ. ಅದನ್ನು ಮತ್ತೆ ಹೊಸದರಂತೆ ಮಾಡಲು ಇಲ್ಲಿದೆ ಉಪಾಯ.
ಬೆಳ್ಳಿಯ ಮಾತ್ರೆಗಳನ್ನು ಸೋಪಿನಿಂದ ಮಾತ್ರ ತೊಳೆಯಬೇಕು. ಪೌಡರ್ ಗಳನ್ನು ಬಳಸಬಾರದು. ಪಾತ್ರೆ ತೊಳೆಯುವ ಬ್ರಷ್ ನಿಂದ ಬೆಳ್ಳಿ ತಟ್ಟೆಯನ್ನು ತಿಕ್ಕಿದರೆ ಅದರಲ್ಲಿ ಗೆರೆ ಬೀಳುವ ಸಾಧ್ಯತೆಗಳಿವೆ ಮತ್ತು ಅವು ಶಾಶ್ವತವಾಗಿ ಉಳಿಯುತ್ತದೆ.
ಬೆಚ್ಚಗಿನ ನೀರಿಗೆ ಅಡುಗೆ ಸೋಡಾ ಹಾಕಿ ಅದರಲ್ಲಿ ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಬಿಡಿ. ಬಳಿಕ ಸೋಪಿನಿಂದ ಮೃದುವಾಗಿ ತೊಳೆದರೆ ನಿಮ್ಮ ಬೆಳ್ಳಿಯ ಆಭರಣ ಹೊಸದರಂತೆ ಆಗುತ್ತದೆ.
ಲಿಂಬೆರಸಕ್ಕೆ ಉಪ್ಪನ್ನು ಬೆರೆಸಿ ನೀರು ಸೇರಿಸಿ. ಅದರಲ್ಲಿ ಸ್ವಲ್ಪ ಹೊತ್ತು ಬೆಳ್ಳಿಯ ಸಾಮಾಗ್ರಿಗಳನ್ನು ನೆನೆಸಿಟ್ಟರೆ ಅದು ಪಳಪಳನೆ ಹೊಳೆಯುತ್ತದೆ. ಹೀಗೆ ಮಾಡಿದ ಬಳಿಕ ಸ್ವಚ್ಛವಾದ ಬಿಳಿಯ ಬಟ್ಟೆಯಿಂದ ಬೆಳ್ಳಿಯ ಪಾತ್ರೆಗಳನ್ನು ಒರೆಸಿ ತೇವಾಂಶ ಉಳಿಯದಂತೆ ನೋಡಿಕೊಳ್ಳಿ. ಬಳಿಕ ಪೇಪರ್ ನಲ್ಲಿ ಸುತ್ತಿಡಿ.