ಬಹುಪಯೋಗಿ ಪಪ್ಪಾಯವನ್ನು ಫೇಸ್ ಪ್ಯಾಕ್ ರೂಪದಲ್ಲೂ ಬಳಸಬಹುದು. ಇದರಿಂದ ಮುಖ ಸ್ವಚ್ಛವಾಗುವುದು ಮಾತ್ರವಲ್ಲ ನೀವು ಗೌರವವರ್ಣವನ್ನೂ ಪಡೆದುಕೊಳ್ಳಬಹುದು. ಸುಲಭವಾಗಿ ಫೇಸ್ ಪ್ಯಾಕ್ ಮಾಡುವುದು ಹೇಗೆ ತಿಳಿಯೋಣ ಬನ್ನಿ.
ಬಲಿತು ಹಣ್ಣಾದ ಪಪ್ಪಾಯದ ಹಣ್ಣಿನ ತಿರುಳಿಂದ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ದಪ್ಪನೆಯ ಹಾಲು ಬೆರೆಸಿ ಮುಖ, ಕುತ್ತಿಗೆಗೆ ಹಚ್ಚಿ ಒಣಗಲು ಬಿಡಿ. ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ವಾರಕ್ಕೆ ಮೂರು ಬಾರಿ ಹೀಗೆ ಮಾಡಬಹುದು.
ಅಕ್ಕಿ ಹಿಟ್ಟಿಗೆ ಪಪ್ಪಾಯ ಸೇರಿಸಿ ಸ್ಕ್ರಬ್ ತಯಾರಿಸಿ. ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಮುಖದ ಮೊಡವೆ, ಗುಳ್ಳೆಗಳು ಮಾಯವಾಗುತ್ತದೆ.
ಪಪ್ಪಾಯ ಪೇಸ್ಟ್ ಗೆ ಅಲೋವೇರಾ ಹಾಗೂ ಜೇನುತುಪ್ಪ ಹಚ್ಚಿ ತೊಳೆಯುವುದರಿಂದ ಆಕರ್ಷಕ ತ್ವಚೆ ನಿಮ್ಮದಾಗುತ್ತದೆ. ಇದು ಫೇಶಿಯಲ್ ನಂತೆ ಕೆಲಸ ಮಾಡುತ್ತದೆ.