alex Certify ಬೆಳಗ್ಗೆ ಎದ್ದತಕ್ಷಣ ಕಾಡುತ್ತದೆ ಒಂದೇ ಸಮನೆ ಬರುವ ಸೀನು; ಇದ್ಯಾವ ಕಾಯಿಲೆ…? ಇದಕ್ಕೇನು ಪರಿಹಾರ…..? ಇಲ್ಲಿದೆ ಡಿಟೇಲ್ಸ್‌… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ಎದ್ದತಕ್ಷಣ ಕಾಡುತ್ತದೆ ಒಂದೇ ಸಮನೆ ಬರುವ ಸೀನು; ಇದ್ಯಾವ ಕಾಯಿಲೆ…? ಇದಕ್ಕೇನು ಪರಿಹಾರ…..? ಇಲ್ಲಿದೆ ಡಿಟೇಲ್ಸ್‌…

ಬೆಳಗಿನ ಮೂಡ್‌ ಸಂತೋಷವಾಗಿ, ಆಹ್ಲಾದಕರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ಬೆಳ್ಳಂಬೆಳಗ್ಗೆ ಕಾಡುವ ಸೀನಿನ ಸಮಸ್ಯೆ ಅವರ ಮೂಡನ್ನು ಕೆಡಿಸಿಬಿಡುತ್ತದೆ. ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಒಂದೇ ಸಮನೆ ಸೀನುತ್ತಾರೆ.

ಕೆಲವೊಮ್ಮೆ ಸೀನುವಿಕೆಯ ಹೊರತಾಗಿ, ಮೂಗು ಮತ್ತು ಗಂಟಲಿನಲ್ಲಿ ತುರಿಕೆ ಕೂಡ ಇರುತ್ತದೆ. ಈ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಸೀನುವುದು ಏಕೆಂದು ತಿಳಿಯೋಣ.

ಅಲರ್ಜಿಕ್ ರಿನಿಟಿಸ್ ಕಾರಣ ಬೆಳಗ್ಗೆ ಎದ್ದ ತಕ್ಷಣ ಸೀನು ಬರುತ್ತಿದ್ದರೆ ಅದನ್ನು ಅಲರ್ಜಿಕ್ ರಿನಿಟಿಸ್ ಎನ್ನುತ್ತಾರೆ. ಇದು ಒಂದು ರೀತಿಯ ಅಲರ್ಜಿಯಾಗಿದ್ದು, ಕೆಲವರನ್ನು ತುಂಬಾ ಕಾಡುತ್ತದೆ. ಈ ಅಲರ್ಜಿ ಇರುವವರು ಬೆಳಗ್ಗೆ ಎದ್ದ ತಕ್ಷಣ ಸೀನುತ್ತಾರೆ ಮತ್ತು ಗಂಟಲಲ್ಲಿ ಅವರಿಗೆ ತುರಿಕೆ ಶುರುವಾಗುತ್ತದೆ. ಇದಕ್ಕೆ ಕಾರಣ ಸುತ್ತಲಿನ ಧೂಳು ಮತ್ತು ಹಾನಿಕಾರಕ ಕಣಗಳು ಮೂಗಿನ ಮೂಲಕ ದೇಹವನ್ನು ಸೇರುವುದು. ಮೂಗು, ಧೂಳಿನ ಕಣಗಳನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.

ಅನೇಕ ಧೂಳಿನ ಕಣಗಳು ಒಂದೇ ಸಮಯದಲ್ಲಿ ದೇಹವನ್ನು ಪ್ರವೇಶಿಸುತ್ತವೆ ಮತ್ತು ಅವುಗಳ ಪ್ರತಿಕ್ರಿಯೆಯಿಂದಾಗಿ ಗಂಟಲಿನಲ್ಲಿ ತುರಿಕೆಯೊಂದಿಗೆ ಸೀನು ಬರಲು ಪ್ರಾರಂಭಿಸುತ್ತದೆ. ಅಲರ್ಜಿಕ್ ರಿನಿಟಿಸ್ ಹೆಚ್ಚು ತೀವ್ರವಾದರೆ ಮೂಗು ಮತ್ತು ಗಂಟಲಿನಲ್ಲಿ ತುರಿಕೆ ಜೊತೆಗೆ ಮುಖದಲ್ಲಿ ಊತವೂ ಬರಬಹುದು.  ತಾಪಮಾನದಲ್ಲಿನ ಬದಲಾವಣೆಯಿಂದ ಕೂಡ ಈ ರೀತಿ ಸೀನು  ಬರುತ್ತದೆ. ವ್ಯಕ್ತಿಯು ನಿದ್ರಿಸಿದಾಗ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ ಮತ್ತು ಎಚ್ಚರವಾದ ತಕ್ಷಣ ಉಷ್ಣತೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ತಾಪಮಾನದಲ್ಲಿನ ಬದಲಾವಣೆಯಿಂದಾಗಿ, ಮೂಗಿನ ವ್ಯವಸ್ಥೆಯು ಅಸಮತೋಲನಗೊಳ್ಳುತ್ತದೆ ಮತ್ತು ಸೀನು  ಪ್ರಾರಂಭವಾಗುತ್ತದೆ.

ಬೆಳಗಿನ ಸೀನುವಿಕೆಗೆ ಪರಿಹಾರ…

ಅಲರ್ಜಿಕ್ ರಿನಿಟಿಸ್ ಇದ್ದಾಗ ಲಘು ಆಹಾರವನ್ನು ತಿನ್ನುವ ಅಭ್ಯಾಸವನ್ನು ಮಾಡಿ. ಆಹಾರದಲ್ಲಿ ಕಲ್ಲು ಉಪ್ಪನ್ನು ಬಳಸಿ. ಯಾವಾಗಲೂ ಉಗುರು ಬೆಚ್ಚನೆಯ ನೀರನ್ನು ಕುಡಿಯಿರಿ. 10-12 ತುಳಸಿ ಎಲೆಗಳು, 1/4 ಟೀಚಮಚ ಕಾಳುಮೆಣಸಿನ ಪುಡಿ, ಒಂದೂವರೆ ಟೀ ಚಮಚ ತುರಿದ ಶುಂಠಿ, ಮತ್ತು ಅರ್ಧ ಟೀ ಚಮಚ ವೈನ್ ರೂಟ್ ಪುಡಿಯನ್ನು ಒಂದು ಕಪ್ ನೀರಿನೊಂದಿಗೆ ಕಡಿಮೆ ಉರಿಯಲ್ಲಿ ಕುದಿಸಿ. ಅದು ಅರ್ಧದಷ್ಟಾದಾಗ ಅದನ್ನು ಫಿಲ್ಟರ್‌ ಮಾಡಿಕೊಂಡು ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ರೀತಿ ಮಾಡುವುದರಿಂದ ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತದೆ.

ಒಂದು ಕಪ್ ಉಗುರುಬೆಚ್ಚಗಿನ ನೀರಿಗೆ ರುಚಿಗೆ ತಕ್ಕಂತೆ ಅರ್ಧ ಚಮಚ ಅರಿಶಿನ ಮತ್ತು ಕಲ್ಲು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಸೀನು ಕಡಿಮೆಯಾಗುತ್ತದೆ. ಅರಿಶಿನದಲ್ಲಿ ಇರುವ ಅಲರ್ಜಿ-ವಿರೋಧಿ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ರಿನಿಟಿಸ್ ಅನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಆಮ್ಲಾ ಪುಡಿಯನ್ನು ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ. ಇದಲ್ಲದೇ ಪುದೀನಾ ಎಲೆಗಳಿಂದ ತಯಾರಿಸಿದ ಟೀ ಕುಡಿಯುವುದರಿಂದಲೂ ಈ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...