ಡಿಬ್ಬಾ ರೊಟ್ಟಿ ಆಂಧ್ರಪ್ರದೇಶದ ಸಾಮಾನ್ಯ ತಿಂಡಿ. ಬೆಳಗಿನ ಉಪಹಾರಕ್ಕೆ ಹಾಗೂ ಸಂಜೆ ಸ್ನ್ಯಾಕ್ಸ್ ಗೆ ಈ ರೊಟ್ಟಿಯನ್ನು ಹೆಚ್ಚಾಗಿ ತಿನ್ನುತ್ತಾರೆ.
ಡಿಬ್ಬಾ ರೊಟ್ಟಿ ಮಾಡಲು ಬೇಕಾಗುವ ಪದಾರ್ಥ : 3 ಕಪ್ ಉದ್ದಿನ ಬೇಳೆ, 2 ಕಪ್ ರವೆ, 1 ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಅವಶ್ಯಕತೆಗನುಗುಣವಾಗಿ ಎಣ್ಣೆ.
ಡಿಬ್ಬಾ ರೊಟ್ಟಿ ಮಾಡುವ ವಿಧಾನ : ಡಿಬ್ಬಾ ರೊಟ್ಟಿ ಮಾಡುವ ಮೊದಲು 2-3 ಗಂಟೆ ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಹಾಕಿ. ನಂತ್ರ ನೆನೆದ ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಿ.
ಮಿಕ್ಸಿ ಮಾಡಿದ ಇದಕ್ಕೆ ರವೆ, ಜೀರಿಗೆ ಉಪ್ಪು ಹಾಕಿ ಸರಿಯಾಗಿ ಕಲಸಿ ಅರ್ಧ ಗಂಟೆ ಹಾಗೆ ಇಡಿ.
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತ್ರ ಎಣ್ಣೆಗೆ ಮಿಕ್ಸ್ ಮಾಡಿದ ಹಿಟ್ಟನ್ನು ಸ್ವಲ್ಪ ಹಾಕಿ ದೋಸೆಯಂತೆ ಸೌಟಿನಿಂದ ರೌಂಡ್ ಮಾಡಿ. ಸ್ವಲ್ಪಹೊತ್ತು ಮಿಶ್ರಣ ಹಾಗೆ ಇರಲಿ. 3-4 ನಿಮಿಷ ಬಿಟ್ಟು ಬಾಣಲೆಗೆ ಹಾಕಿರುವ ಮಿಶ್ರಣವನ್ನು ಮಗುಚಿ ಮತ್ತೆ ಬೇಯಿಸಿ. ರುಚಿರುಚಿಯಾದ ಡಿಬ್ಬಾ ರೊಟ್ಟಿ ತಯಾರು.
ಖಾರ ಬೇಕಾದಲ್ಲಿ ಈ ಮಿಶ್ರಣಕ್ಕೆ ಮೆಣಸಿನ ಕಾಯಿಯನ್ನು ಹಾಕಿ ರುಬ್ಬಿಕೊಳ್ಳಬಹುದು.