ಕ್ರೀಡೆ ಅಥವಾ ವ್ಯಾಯಾಮದ ವೇಳೆ ಅಭ್ಯಾಸ ಹೆಚ್ಚಾದಾಗ ಅಥವಾ ಕೆಲಸ ಮಾಡುವಾಗ ಕುಳಿತುಕೊಳ್ಳುವ ಭಂಗಿಯಿಂದ ಬೆನ್ನು ನೋವು ಆಗುವುದುಂಟು. ಇದಕ್ಕೆ ಸರಿಯಾಗಿ ವಿಶ್ರಾಂತಿಯನ್ನು ಪಡೆಯುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಬೆನ್ನು ನೋವು ನಿವಾರಣೆಗೆ ಐಸ್ ಅಥವಾ ಉಪ್ಪು ಶಾಖದ ಪ್ಯಾಡ್ ಬಳಸುವ ಮೂಲಕ ನೋವನ್ನು ನಿವಾರಿಸಬಹುದು. ಇದನ್ನು ಬಳಸುವುದರಿಂದ ಸ್ನಾಯುಗಳು ಸಡಿಲವಾಗುತ್ತವೆ ಜೊತೆಗೆ ನೋವು ನಿವಾರಣೆಯಾಗುತ್ತದೆ. ಸತತ 30 ನಿಮಿಷಗಳ ಕಾಲ ಇದನ್ನು ಪುನರಾವರ್ತಿಸುತ್ತಿದ್ದರೆ ನೋವು ಕಡಿಮೆಯಾಗುತ್ತದೆ. ಉಪ್ಪಿನಲ್ಲಿರುವ ಮೆಗ್ನೇಶಿಯಂ, ಸ್ನಾಯುಗಳ ನೋವನ್ನು ಕಡಿಮೆ ಮಾಡುತ್ತದೆ.
ಬೆನ್ನು ಮೂಳೆಯ ನೋವನ್ನು ಪರಿಹರಿಸುವ ಬದಲು ಅದನ್ನು ಬರದಂತೆ ತಡೆಯುವುದು ಮುಖ್ಯ. ಕಚೇರಿಯಲ್ಲಿ ಬಹಳ ಹೊತ್ತು ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದೂ ಇದಕ್ಕೆ ಕಾರಣವಾದೀತು. ಕುಳಿತುಕೊಳ್ಳುವಾಗ ಮತ್ತು ಮಲಗುವಾಗ ಅಥವಾ ದೀರ್ಘ ಸಮಯದ ಕೆಲಸ ಕೈಗೊಂಡಾಗ ಸೂಕ್ತವಾದ ಭಂಗಿಯನ್ನು ಅನುಸರಿಸುವುದು ಬಹಳ ಮುಖ್ಯ.