ಇತ್ತೀಚೆಗೆ ಕಡಿಮೆ ವಯಸ್ಸಿನಲ್ಲೇ ಬೆನ್ನುನೋವು ಬರೋದು ಕಾಮನ್ ಆಗಿಬಿಟ್ಟಿದೆ. ಆಫೀಸ್ ನ ಕೆಲಸ, ಓಡಾಟ, ಮನೆ ಕೆಲಸ ಹೀಗೆ ಸದಾ ಬ್ಯುಸಿಯಿರುವ ಜನರಿಗೆ ಬೆನ್ನುನೋವು ಮಾಮೂಲಿ ಎನ್ನುವಂತಾಗಿದೆ. ಆರಂಭದಲ್ಲಿ ಸಣ್ಣ ನೋವನ್ನು ಪ್ರತಿಯೊಬ್ಬರೂ ನಿರ್ಲಕ್ಷಿಸುತ್ತಾರೆ. ನಂತ್ರ ನೋವು ಹೆಚ್ಚಾಗ್ತಿದ್ದಂತೆ ವೈದ್ಯರ ಬಳಿ ಓಡ್ತಾರೆ.
ನಿರಂತರವಾಗಿ ಒಂದೇ ಕಡೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಆಗಾಗ್ಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ದೂರದೂರುಗಳಿಗೆ ಪದೇ ಪದೇ ಪ್ರಯಾಣ ಮಾಡುವುದರಿಂದ ಸಹ ಬೆನ್ನುನೋವು ಬರುತ್ತದೆ. ಬೆನ್ನುನೋವು ಕಾಣಿಸಿಕೊಂಡ ತಕ್ಷಣ ಅಲಕ್ಷ ಮಾಡದಿರಿ.
ಕುಳಿತುಕೊಳ್ಳುವ ಭಂಗಿ ನೇರವಾಗಿರಲಿ. ಕುಳಿತು ಕೆಲಸ ಮಾಡುವಾಗ ದೇಹಕ್ಕೆ ಸ್ವಲ್ಪ ಆರಾಮ ನೀಡಿ. ಸ್ವಲ್ಪ ಹೊತ್ತು ಓಡಾಡಿ. ಅತ್ತ ಇತ್ತ ತಿರುಗಿ. ಕುಳಿತುಕೊಂಡಲ್ಲೇ ಬೆನ್ನು ನೋವು ನಿವಾರಣೆಗೆ ಸಣ್ಣ ವ್ಯಾಯಾಮ ಮಾಡಿ.
ಬೆನ್ನು ನೋವಿರುವವರು ತಮ್ಮ ಆಹಾರದಲ್ಲಿ ವಿಟಮಿನ್ ಡಿ 3, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ, ರಂಜಕ ಇರುವ ಆಹಾರಗಳನ್ನು ಸೇವಿಸಿ. ಹಸಿರು ತರಕಾರಿಗಳನ್ನ ತಿನ್ನಿ. ಬೆನ್ನುನೋವಿನ ಸಮಸ್ಯೆಯನ್ನು ನಿವಾರಿಸಲು ಮೀನು ತಿನ್ನಬಹುದು.