alex Certify ಬೆಡ್ರೂಮ್‌ ಸೀನ್‌ನಲ್ಲಿ ಮೈಮರೆತುಬಿಟ್ಟಿದ್ದ ನಟ; ಕಟ್‌ ಎಂದರೂ ಸುಮ್ಮನಾಗದ್ದಕ್ಕೆ ನಟಿ ಮಾಡಿದ್ದೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಡ್ರೂಮ್‌ ಸೀನ್‌ನಲ್ಲಿ ಮೈಮರೆತುಬಿಟ್ಟಿದ್ದ ನಟ; ಕಟ್‌ ಎಂದರೂ ಸುಮ್ಮನಾಗದ್ದಕ್ಕೆ ನಟಿ ಮಾಡಿದ್ದೇನು ಗೊತ್ತಾ ?

ಬಾಲಿವುಡ್‌ ಚಿತ್ರಗಳಲ್ಲಿ ಚುಂಬನ ಸೇರಿದಂತೆ ರೊಮ್ಯಾಂಟಿಕ ದೃಶ್ಯಗಳು ಹೊಸದೇನಲ್ಲ. ಬಹಳ ವರ್ಷಗಳಿಂದಲೂ ಇಂಟಿಮೇಟ್‌ ಸೀನ್‌ ಟ್ರೆಂಡಿಂಗ್‌ನಲ್ಲಿದೆ. 1992ರಲ್ಲಿ ಬಿಡುಗಡೆಯಾದ ನಟಿ ಡಿಂಪಲ್ ಕಪಾಡಿಯಾ ನಟನೆಯ ‘ಮಾರ್ಗ್’ ಚಿತ್ರ ಕೂಡ ಇವುಗಳಲ್ಲೊಂದು.

ಈ ಸಿನೆಮಾದಲ್ಲಿ ನಟ ವಿನೋದ್‌ ಖನ್ನಾ ಹಾಗೂ ಡಿಂಪಲ್‌ ಕಪಾಡಿಯಾರ ಇಂಟಿಮೇಟ್‌ ಸೀನ್‌ಗಳಿವೆ. ಬೆಡ್‌ರೂಮ್‌ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟ ವಿನೋದ್‌ ಖನ್ನಾ ಮೈಮರೆತುಬಿಟ್ಟಿದ್ದರು. ಇದೇ ವಿಚಾರ ವಿವಾದಕ್ಕೂ ಕಾರಣವಾಗಿತ್ತು.

ಚಿತ್ರೀಕರಣದ ವೇಳೆ ಸೀನ್ ಮುಗಿದು, ನಿರ್ದೇಶಕ ಮಹೇಶ್ ಭಟ್ ‘ಕಟ್’ ಎಂದು ಕೂಗಿದ ನಂತರವೂ ವಿನೋದ್‌ ಖನ್ನಾ, ಡಿಂಪಲ್ ಕಪಾಡಿಯಾಗೆ ಚುಂಬಿಸುತ್ತಲೇ ಇದ್ದರು. ವಿನೋದ್‌ ಖನ್ನಾ ಮಾರ್ಗ್‌ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.‌ ಶೂಟಿಂಗ್‌ಸಂದರ್ಭದಲ್ಲಿ ಆ ಪ್ರಣಯ ದೃಶ್ಯದಲ್ಲಿ ವಿನೋದ್‌ ಖನ್ನಾ ಎಷ್ಟು ಮೈಮರೆತಿದ್ದರೆಂದರೆ ನಿರ್ದೇಶಕರು ಕಟ್‌ ಎಂದು ಕೂಗಿದ್ದು ಅವರಿಗೆ ಕೇಳಲೇ ಇಲ್ಲ.

ಚಿತ್ರೀಕರಣಕ್ಕೂ ಮುನ್ನವೇ ಸೀನ್‌ ಬಗ್ಗೆ ನಿರ್ದೇಶಕ ಮಹೇಶ್‌ ಭಟ್‌, ಡಿಂಪಲ್ ಕಪಾಡಿಯಾ ಹಾಗೂ ವಿನೋದ್‌ ಖನ್ನಾಗೆ ವಿವರಿಸಿದ್ದರು. ಈ ಚುಂಬನದ ದೃಶ್ಯದಲ್ಲಿ ಒಂದು ಟೇಕ್ ಆದ ನಂತರ ಇನ್ನೊಂದು ಟೇಕ್ ತೆಗೆದುಕೊಳ್ಳಲಾಗುವುದು, ಅದರಲ್ಲಿ ಹೆಚ್ಚು ಇಂಟೆನ್ಸಿಟಿ ಇರಬೇಕು ಎಂದು ನಿರ್ದೇಶಕರು ಹೇಳಿದ್ದಾರೆ. ಸ್ವಲ್ಪ ದೂರಕ್ಕೆ ಸರಿದು ನಿಂತ ಮಹೇಶ್‌ ಭಟ್‌, ಅಲ್ಲಿಂದಲೇ ಆಕ್ಷನ್‌ ಎಂದಿದ್ದಾರೆ. ಡಿಂಪಲ್‌ಗೆ ಮುತ್ತಿಟ್ಟ ವಿನೋದ್‌ ಖನ್ನಾ, ತಬ್ಬಿಕೊಂಡಿದ್ದಾರೆ.

ಕೂಡಲೇ ನಿರ್ದೇಶಕರು ಕಟ್‌ ಎಂದರೂ ವಿನೋದ್‌ ಖನ್ನಾ ಸುಮ್ಮನಾಗಲಿಲ್ಲ. ಡಿಂಪಲ್‌ ಕಪಾಡಿಯಾಗೆ ಚುಂಬಿಸುತ್ತಲೇ ಇದ್ದರು. ಬೆದರಿದ ಡಿಂಪಲ್‌, ಡೈರೆಕ್ಟರ್‌ ಬಳಿ ಸಹಾಯ ಕೇಳಿದ್ದಾಳೆ. ಕೂಡಲೇ ಮಧ್ಯಪ್ರವೇಶಿಸಿದ ಮಹೇಶ್‌ ಭಟ್‌ ಸೀನ್‌ ಕಟ್‌ ಮಾಡಿಸಿದರು. ಘಟನೆಯಿಂದ ಗಾಬರಿಯಾದ ನಟಿ ಡಿಂಪಲ್‌ ಕಪಾಡಿಯಾ ಮೇಕಪ್ ರೂಮಿನಲ್ಲಿ ಅಳುತ್ತ ಕುಳಿತಿದ್ದರಂತೆ. ನಂತರ ವಿನೋದ್‌ ಖನ್ನಾ ತಮ್ಮ ನಡತೆಗೆ ಕ್ಷಮೆ ಕೋರಿದ್ರು. ಆ ದಿನ ವಿನೋದ್‌ ಕುಡಿದು ಬಂದಿದ್ದರಂತೆ. ಅದೇ ಅಮಲಿನಲ್ಲಿ ಅಚಾತುರ್ಯವಾಗಿದೆ ಅಂತಾ ಮಹೇಶ್‌ ಭಟ್‌ ಕೂಡ ಸಮಜಾಯಿಷಿ ನೀಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...