alex Certify ಬೆಚ್ಚಿ ಬೀಳಿಸುವಂತಿದೆ ಹಾಡಹಗಲೇ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ; ಸಾರ್ವಜನಿಕರ ಸಮ್ಮುಖದಲ್ಲೇ ಗನ್ ಹಿಡಿದು ಯುವತಿಗೆ ಬೆದರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವಂತಿದೆ ಹಾಡಹಗಲೇ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ; ಸಾರ್ವಜನಿಕರ ಸಮ್ಮುಖದಲ್ಲೇ ಗನ್ ಹಿಡಿದು ಯುವತಿಗೆ ಬೆದರಿಕೆ

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಹಾಡಹಗಲೇ ನಡೆದಿರುವ ಕೃತ್ಯವೊಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಗನ್ ಹಿಡಿದ ದುಷ್ಕರ್ಮಿಯೊಬ್ಬ ಸಾರ್ವಜನಿಕರ ಸಮ್ಮುಖದಲ್ಲಿ ಯುವತಿಗೆ ಬೆದರಿಕೆ ಹಾಕಿ ಚಿನ್ನದ ಸರ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದು, ಈ ಎಲ್ಲ ಘಟನಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸೋಮವಾರದಂದು ಗಾಜಿಯಾಬಾದ್ ನ ಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿ ನಡೆದುಕೊಂಡು ಬರುತ್ತಿದ್ದ ವೇಳೆ ಗನ್ ಹಿಡಿದ ದುಷ್ಕರ್ಮಿ ಏಕಾಏಕಿ ಎದುರಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಹಿಂದೆ ಸರಿದಿದ್ದು, ಆಗ ಚಿನ್ನದ ಸರ ಬಿಚ್ಚಿಕೊಡುವಂತೆ ಬೆದರಿಕೆ ಹಾಕಿದ್ದಾನೆ.

ಜೀವ ಭಯದಿಂದ ಯುವತಿ ತನ್ನ ಚಿನ್ನದ ಸರವನ್ನು ಕಿತ್ತು ಕೆಳಕ್ಕೆ ಹಾಕಿದ್ದು, ಅದನ್ನು ತೆಗೆದುಕೊಂಡ ದುಷ್ಕರ್ಮಿ ಬಳಿಕ ಮೊಬೈಲ್ ಫೋನ್ ಸಹ ಕಿತ್ತುಕೊಂಡಿದ್ದಾನೆ. ಈ ವೇಳೆ ಮತ್ತೊಬ್ಬ ಯುವಕ ಬಂದಿದ್ದು, ಆದರೆ ದುಷ್ಕರ್ಮಿ ಕೈಯಲ್ಲಿ ಗನ್ ಇದ್ದ ಕಾರಣ ಏನೂ ಮಾಡಲು ಸಾಧ್ಯವಾಗಿಲ್ಲ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿ ವಿರುದ್ಧ ದರೋಡೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

— Express Delhi-NCR (@ieDelhi) December 13, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...