alex Certify ಬೆಚ್ಚಿ ಬೀಳಿಸುವಂತಿದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವಂತಿದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕನೊಬ್ಬ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದವರೊಬ್ಬರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಘಟನೆ ಪಂಜಾಬಿನ ಲೂಧಿಯಾನ ಸಮೀಪದ ಖನ್ನಾಸ್ ಚಾವ ರೈಲು ನಿಲ್ದಾಣದ ಬಳಿ ಅಕ್ಟೋಬರ್ 6 ರಂದು ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿರುವಂತೆ ಯುವಕನೊಬ್ಬ ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ನಿಂತು ಪೋಲ್ ಗಳು ಬಂದಾಗ ತಪ್ಪಿಸಿಕೊಳ್ಳುತ್ತಿರುತ್ತಾನೆ. ಈ ವಿಡಿಯೋ ಕ್ಲಿಪ್ 1 ನಿಮಿಷ 17 ಸೆಕೆಂಡುಗಳ ಕಾಲ ಇದೆ.

ಅಂತಿಮವಾಗಿ ಯುವಕನ ತಲೆ ಪೋಲ್ ಒಂದಕ್ಕೆ ಬಡಿದಿದ್ದು ಸ್ಥಳದಲ್ಲಿಯೇ ಸತ್ತು ಬಿದ್ದಿದ್ದಾನೆ. ಮೂಲಗಳ ಪ್ರಕಾರ ಮಾಲ್ವಾ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಹಿಡಿದ ವ್ಯಕ್ತಿ ಮೃತ ಯುವಕನ ಪರಿಚಿತನೇ ಇರಬೇಕು ಎಂದು ಶಂಕಿಸಲಾಗಿದೆ. ಘಟನೆ ಬಳಿಕ ತಾನು ಎಲ್ಲಿ ಸಂಕಷ್ಟಕ್ಕೆ ಸಿಲುಕುತ್ತೇನೋ ಎಂಬ ಕಾರಣಕ್ಕೆ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...