alex Certify ಬೆಚ್ಚಿ ಬೀಳಿಸುತ್ತೆ ಕೋವಿಡ್​ ಎರಡನೇ ಅಲೆಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುತ್ತೆ ಕೋವಿಡ್​ ಎರಡನೇ ಅಲೆಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ….!

ಕಳೆದ ವರ್ಷ ಉಂಟಾದ ಎರಡನೇ ತರಂಗದಿಂದಾಗಿ ಅಕ್ಟೋಬರ್​ ಅಂತ್ಯದ ವೇಳೆಗೆ 19 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಮಕ್ಕಳು ಅನಾಥರಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅಧಿಕೃತ ಚಾನೆಲ್​ಗಳಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ 1.47 ಲಕ್ಷ ಮಕ್ಕಳು ಕೋವಿಡ್​ನಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಆದರೆ ಈ ಅಧ್ಯಯನದಲ್ಲಿ ತಿಳಿದುಬಂದ ಮಾಹಿತಿಯ ಪ್ರಕಾರ ಈ ಅಧಿಕೃತ ಅಂಕಿಗಿಂತ 12 ಪಟ್ಟು ಅಧಿಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ .

ದಿ ಲ್ಯಾನ್ಸೆಟ್: ಚೈಲ್ಡ್ ಅಂಡ್ ಅಡೋಲೆಸೆಂಟ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, 10-17 ವರ್ಷ ವಯಸ್ಸಿನ 12.45 ಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ತಮ್ಮ ಹೆತ್ತವರು ಅಥವಾ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ತಂಡವೊಂದು ಅಂದಾಜಿಸಿದೆ. 5-9 ವರ್ಷಗಳ ಮಕ್ಕಳು ಮತ್ತು 0-4 ವರ್ಷಗಳ ಮಕ್ಕಳ ಪೈಕಿ 2.66 ಲಕ್ಷ. ಸುಮಾರು 15 ಲಕ್ಷ ಮಂದಿ ತಂದೆ ಮತ್ತು ನಾಲ್ಕು ಲಕ್ಷ ಮಕ್ಕಳು ತಾಯಂದಿರನ್ನು ಕಳೆದುಕೊಂಡಿದ್ದಾರೆ.

ಮಾರ್ಚ್​ 2020ರಿಂದ ಜಾಗತಿಕವಾಗಿ 50 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿಡ್ 19ನಿಂದಾಗಿ ತಮ್ಮ ಪೋಷಕರು ಅಥವಾ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ. ಇದು ಓಮಿಕ್ರಾನ್​​​ ರೂಪಾಂತರಿಯು ವಿಶ್ವಕ್ಕೆ ಕಾಲಿಡುವ ಮುನ್ನವೇ ಉಂಟಾದ ಸಾವು – ನೋವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...