ಕಳೆದ ವರ್ಷ ಉಂಟಾದ ಎರಡನೇ ತರಂಗದಿಂದಾಗಿ ಅಕ್ಟೋಬರ್ ಅಂತ್ಯದ ವೇಳೆಗೆ 19 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಮಕ್ಕಳು ಅನಾಥರಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅಧಿಕೃತ ಚಾನೆಲ್ಗಳಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ 1.47 ಲಕ್ಷ ಮಕ್ಕಳು ಕೋವಿಡ್ನಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಆದರೆ ಈ ಅಧ್ಯಯನದಲ್ಲಿ ತಿಳಿದುಬಂದ ಮಾಹಿತಿಯ ಪ್ರಕಾರ ಈ ಅಧಿಕೃತ ಅಂಕಿಗಿಂತ 12 ಪಟ್ಟು ಅಧಿಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ .
ದಿ ಲ್ಯಾನ್ಸೆಟ್: ಚೈಲ್ಡ್ ಅಂಡ್ ಅಡೋಲೆಸೆಂಟ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, 10-17 ವರ್ಷ ವಯಸ್ಸಿನ 12.45 ಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ತಮ್ಮ ಹೆತ್ತವರು ಅಥವಾ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ತಂಡವೊಂದು ಅಂದಾಜಿಸಿದೆ. 5-9 ವರ್ಷಗಳ ಮಕ್ಕಳು ಮತ್ತು 0-4 ವರ್ಷಗಳ ಮಕ್ಕಳ ಪೈಕಿ 2.66 ಲಕ್ಷ. ಸುಮಾರು 15 ಲಕ್ಷ ಮಂದಿ ತಂದೆ ಮತ್ತು ನಾಲ್ಕು ಲಕ್ಷ ಮಕ್ಕಳು ತಾಯಂದಿರನ್ನು ಕಳೆದುಕೊಂಡಿದ್ದಾರೆ.
ಮಾರ್ಚ್ 2020ರಿಂದ ಜಾಗತಿಕವಾಗಿ 50 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿಡ್ 19ನಿಂದಾಗಿ ತಮ್ಮ ಪೋಷಕರು ಅಥವಾ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ. ಇದು ಓಮಿಕ್ರಾನ್ ರೂಪಾಂತರಿಯು ವಿಶ್ವಕ್ಕೆ ಕಾಲಿಡುವ ಮುನ್ನವೇ ಉಂಟಾದ ಸಾವು – ನೋವಾಗಿದೆ.