
ವಿಶ್ವಸಂಸ್ಥೆಯ ಹೈ ಕಮಿಷನರ್ ಫಿಲಿಪ್ಪೋ ಗ್ರ್ಯಾಂಡಿ ಈ ವಿಚಾರವಾಗಿ ಟ್ವೀಟ್ ಮಾಡಿ ಅಂದಾಜು ಮಾಹಿತಿ ನೀಡಿದ್ದಾರೆ. ಈ ಸಂಖ್ಯೆಯು ಶೀಘ್ರದಲ್ಲಿಯೇ ಇನ್ನಷ್ಟು ಏರಿಕೆ ಕಾಣಲಿದೆ ಎಂದೂ ಅವರು ಅಂದಾಜಿಸಿದ್ದಾರೆ.
ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಪೊಲೆಂಡ್ಗೆ 2,81,000, ಹಂಗೇರಿಗೆ 84.500ಕ್ಕೂ ಅಧಿಕ ಮಂದಿ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಮಾಲ್ಡೋವಾಗೆ ಸುಮಾರು 36,400, ರೋಮೆನಿಯಾಗೆ 32,500 ಹಾಗೂ ಸ್ಲೋವೆಕಿಯಾಗೆ 30 ಸಾವಿರ ಜನರು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಇನ್ನುಳಿದವರು ಇನ್ನೂ ಅಂದಾಜಿಸಲು ಸಾಧ್ಯವಾಗದಂತೆ ವಿವಿಧ ದೇಶಗಳಿಗೆ ಚದುರಿ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಉಕ್ರೇನ್ನ ನಿರಾಶ್ರಿತರಿಗೆ ಗಡಿ ಭಾಗದ ದೇಶಗಳಾದ ಪೋಲೆಂಡ್, ಹಂಗೇರಿ, ಬಲ್ಗೇರಿಯಾ, ಮೊಲ್ಡೊವಾ ಮತ್ತು ರೊಮೇನಿಯಾದ ನಾಯಕರು ಸ್ವಾಗತಿಸುತ್ತಿದ್ದಾರೆ. ರಷ್ಯಾವು ಉಕ್ರೇನ್ನ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುತ್ತಾ ಇರೋದ್ರಿಂದ ನಾಗರಿಕರ ವಾಸ ಕಷ್ಟಕರವಾಗಿದೆ.