ಹಿಮಾಚಲ ಪ್ರದೇಶದಿಂದ ಮಾದಕ ವಸ್ತು ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದ ವ್ಯಕ್ತಿಯೋರ್ವನನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳಾ ಮೂಲದ ಬಸಿಲ್ ಜಾರ್ಜ್ ಎಂಬ ಆರೋಪಿಯನ್ನ ಗೋವಿಂದಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಮಾಚಲ ಪ್ರದೇಶದಿಂದ ಚರಸ್ ತರಿಸಿಕೊಳ್ಳುತ್ತಿದ್ದ ಆರೋಪಿ ಬೆಂಗಳೂರನ್ನ ತನ್ನ ಮಾದಕ ಜಾಲದ ಮುಖ್ಯ ನಗರವಾಗಿಸಿಕೊಂಡಿದ್ದ. ನಗರದ ಕಾಲೇಜ್ ವಿದ್ಯಾರ್ಥಿಗಳು, ಪ್ರತಿಷ್ಠಿತ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಸಧ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನಟರ ರೆಮ್ಯುನರೇಷನ್ ಹೆಚ್ಚಳಕ್ಕೆ ಕರಣ್ ಜೋಹಾರ್ ಬೇಸರ
ಖಚಿತ ಮಾಹಿತಿ ಮೇರೆಗೆ ಬಸಿಲ್ ಜಾರ್ಜ್ ಬೆನ್ನಟ್ಟಿ ಹೊರಟ ಪೊಲೀಸರಿಗೆ ಅವನ ಚಟುವಟಿಕೆಗಳು ತಿಳಿದುಬಂದಿವೆ. ಆನಂತರ ಅವನನ್ನ ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಬಳಿ 5.8 ಲಕ್ಷ ಮೌಲ್ಯದ 575 ಗ್ರಾಂ ಚರಸ್ ಪತ್ತೆಯಾಗಿದ್ದು, ಗೋವಿಂದಪುರ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.