ಬೆಂಗಳೂರಿನ ವರ್ತಕರಿಗೆ ಇದ್ದ ಲೈಸೆನ್ಸ್ ನವೀಕರಣದ ಗಡುವನ್ನು ಬಿಬಿಎಂಪಿ ವಿಸ್ತರಿಸಿದ್ದು ಇದರಿಂದ ಸಾವಿರಾರು ವರ್ತಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಪರವಾನಗಿಯನ್ನು ನವೀಕರಿಸಲು ವ್ಯಾಪಾರಿಗಳಿಗೆ ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಮಾರ್ಚ್ 31ರ ಒಳಗಾಗಿ ಅರ್ಜಿ ಸಲ್ಲಿಸುವ ವರ್ತಕರು ಬಿಬಿಎಂಪಿ ಸೂಚನೆ ನೀಡಿರುವಂತೆ 25 ಪ್ರತಿಶತ ದಂಡವನ್ನು ಪಾವತಿ ಮಾಡಬೇಕಿಲ್ಲ.
ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ದಂಡವನ್ನು ಒಂದು ತಿಂಗಳುಗಳ ಕಾಲ ವಸೂಲಿ ಮಾಡದೇ ಇರಲು ನಿರ್ಧರಿಸಲಾಗಿದೆ.
ಆದರೆ ಈ ದಂಡ ಮನ್ನಾವು ಮಾರ್ಚ್ 31ರ ಬಳಿಕ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸುವುದಿಲ್ಲ. ಇವರು 100 ಪ್ರತಿಶತ ದಂಡ ಪಾವತಿ ಮಾಡಲೇಬೇಕು ಎಂದು ಬಿಬಿಎಂಪಿ ಹೇಳಿದೆ.