alex Certify ಬೆಂಗಳೂರಿನ ಐಕಿಯಾ ಸ್ಟೋರ್‌ನಲ್ಲಿ ಜನಜಾತ್ರೆ: ಸಖತ್ ವೈರಲ್ ಆಗ್ತಿವೆ ವೆರೈಟಿ ವೆರೈಟಿ ಮೀಮ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಐಕಿಯಾ ಸ್ಟೋರ್‌ನಲ್ಲಿ ಜನಜಾತ್ರೆ: ಸಖತ್ ವೈರಲ್ ಆಗ್ತಿವೆ ವೆರೈಟಿ ವೆರೈಟಿ ಮೀಮ್ಸ್

ಸೋಶಿಯಲ್ ಮೀಡಿಯಾದ ಇಲ್ಲದ ಜಗತ್ತು ಊಹಿಸಿಕೊಳ್ಳೊದಕ್ಕೆ ಎಂದಾದರೂ ಪ್ರಯತ್ನಿಸಿದ್ದಿರಾ..? ಸಾಧ್ಯವೇ ಇಲ್ಲ. ಸೋಶಿಯಲ್ ಮೀಡಿಯಾ ಚಿತ್ರ-ವಿಚಿತ್ರ ಹಾಗೂ ಅಷ್ಟೇ ಎಂಟರ್‌ಟೈನ್‌ ವಿಡಿಯೋಗಳಿಗೆ ಫೇಮಸ್ ಆಗಿದೆಯೋ, ಅಷ್ಟೇ ಮಿಮ್ಸ್‌ಗಳಿಗೂ ಫೇಮಸ್. ಕೆಲ ಮೀಮ್ಸ್‌ಗಳು ಉದ್ದೇಶಪೂರ್ವಕವಾಗಿಯೇ ಜನರನ್ನ ವ್ಯಂಗವಾಗಿ ಆಡುವುದಕ್ಕೆ ಬಳಸಿಕೊಳ್ತಾರೆ, ಇನ್ನು ಕೆಲ ಮಿಮ್ಸ್‌ಗಳು ವಾಸ್ತವದ ಚಿತ್ರಣವನ್ನ ಹಾಸ್ಯದ ರೂಪದಲ್ಲಿ ಜನರ ಮುಂದಿಡಲು ಬಳಸಲಾಗುತ್ತೆ. ನೀವು ಏನಾದರೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುವವರಾದರೆ ನಿಮಗೆ ಮೊನ್ನೆಯಿಂದ ಒಂದು ಸಂಗತಿ ಪದೇ ಪದೇ ಕಣ್ಣಿಗೆ ಬೀಳ್ತಿರಬಹುದು. ಅದೇ ಬೆಂಗಳೂರಿನ ಐಕಿಯಾ ಸ್ಟೋರ್‌ನ ಜನದಟ್ಟಣೆಯ ಮೀಮ್ಸ್.

ಬೆಂಗಳೂರಿನ ನಾಗಸಂದ್ರದ ಮೆಟ್ರೋ ಸ್ಟೇಷನ್ ಬಳಿ ಐಕಿಯಾ ಮಳಿಗೆ ಲೋಕಾರ್ಪಣೆಗೊಂಡಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಈ ಬೃಹತ್ ಮಳಿಗೆಯನ್ನು ಉದ್ಘಾಟಿಸಿದ್ದರು. ಇದಾದ ಬಳಿಕ ಕಳೆದ ಭಾನುವಾರದಿಂದ ಈ ಐಕಿಯಾ ಸ್ಟೋರ್‌ನಲ್ಲಿ ಜನದಟ್ಟಣೆ ಅಂದಾಜಿಗೂ ಮೀರಿ ಸೇರಿತ್ತು. ಸಾಕಷ್ಟು ಪ್ರಮಾಣದಲ್ಲಿ ಜನ ಇಲ್ಲಿ ಬಂದು ತಮಗೆ ಬೇಕಾಗಿರುವ ವಸ್ತುಗಳನ್ನ ಖರೀದಿ ಮಾಡಿದ್ದರು.

ಒಮ್ಮಿಂದೊಮ್ಮೆಲೆ ಈ ಮಳಿಗೆ ಬಳಿ ಎಷ್ಟು ಜನ ಜಮಾಯಿಸಿದ್ರು ಅಂದ್ರೆ, ಮಳಿಗೆ ಒಳಗೆ ಪ್ರವೇಶ ಪಡೆಯುವುದಕ್ಕೆ ಕನಿಷ್ಠ 2-3 ಗಂಟೆಯವರೆಗೆ ಕಾಯಬೇಕಾಗಿತ್ತು. ಜಾತ್ರೆಯ ವಾತಾವರಣವೇ ಅಲ್ಲಿ ನಿರ್ಮಾಣವಾಗಿತ್ತು. ಹೋಗುವಾಗ ಒಂದೆರಡು ವಸ್ತುಗಳನ್ನ ಕೊಂಡುಕೊಳ್ಳೊಕೆ ಹೊರಟವರು ಅಲ್ಲಿಂದ ಹತ್ತಾರು ವಸ್ತುಗಳನ್ನ ಖರೀದಿ ಮಾಡಿದ್ದರು.

ಸದ್ಯಕ್ಕೆ ಇದೇ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಸ್ವತಃ ಐಕಿಯಾ ಟ್ವಿಟ್ಟರ್ ಖಾತೆಯಲ್ಲಿ ಭಾರೀ ಜನರು ಜಮಾಯಿಸಿದ್ದು ಘಂಟಾಘೋಷವಾಗಿ ಹೇಳಿಕೊಂಡಿದೆ.

ಇದೇ ಸುದ್ದಿ ಈಗ ಮೀಮ್ಸ್‌ಗಳ ರೂಪ ಪಡೆದಿದೆ. ಸಾಕಷ್ಟು ತಮಾಷೆಯ ಮೀಮ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಇದನ್ನ ನೋಡ್ತಿದ್ರೆ ಎಂಥವರಿಗೂ ನಗು ಉಕ್ಕಿಸುವ ಹಾಗಿದೆ.

— Keerthi (@thekeerthikumar) June 26, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...