alex Certify ಬೆಂಕಿಯಲ್ಲಿ ಆಹುತಿಯಾಗಲಿದ್ದ ನಾಯಿಯನ್ನು ರಕ್ಷಿಸಿದ ಅಧಿಕಾರಿಗೆ ವ್ಯಾಪಕ ಪ್ರಶಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಯಲ್ಲಿ ಆಹುತಿಯಾಗಲಿದ್ದ ನಾಯಿಯನ್ನು ರಕ್ಷಿಸಿದ ಅಧಿಕಾರಿಗೆ ವ್ಯಾಪಕ ಪ್ರಶಂಸೆ

ಆಕಸ್ಮಿಕವಾಗಿ ಕಾರೊಂದಕ್ಕೆ ಬೆಂಕಿ ತಗುಲಿದ್ದು, ಅದರೊಳಗಿದ್ದ ಶ್ವಾನವು ಜೀವಕ್ಕಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಡಗ್ಲಾಸ್ ಕೌಂಟಿಯ ಡೆಪ್ಯೂಟಿ ಮೈಕೆಲ್ ಗ್ರೆಗೊರೆಕ್ ಅವರು ಕೂಡಲೇ ಕಾರಿನತ್ತ ದೌಡಾಯಿಸಿ ಕಿಟಕಿಯನ್ನು ಒಡೆದುಹಾಕಿ ನಾಯಿಯನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ

ಬೆಂಕಿಯಿಂದ ಉರಿಯುತ್ತಿದ್ದ ಎಸ್‌ಯುವಿ ಕಾರಿನಿಂದ ನಾಯಿಯನ್ನು ಹೊರಗೆಳೆದಿದ್ದಕ್ಕೆ ಅಧಿಕಾರಿಯನ್ನು ಜನರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಲಾಕ್ ಮಾಡಿದ ಕಾರಿನೊಳಗೆ ತನ್ನ ನಾಯಿಯಿದೆ ಎಂದು ಮಾಲೀಕರು ದುಃಖ ವ್ಯಕ್ತಪಡಿಸುತ್ತಿದ್ದಂತೆ, ಕೂಡಲೇ ಗ್ರೆರೊರೆಕ್ ಶ್ವಾನದ ರಕ್ಷಣೆಗೆ ಧಾವಿಸಿದ್ದಾರೆ.

ಗ್ರೆಗೊರೆಕ್ ಕಾರಿನ ಹಿಂಬದಿಯ ಕಿಟಕಿಯನ್ನು ಒಡೆದುಹಾಕಿ ನಾಯಿ ಹಾಂಕ್ ನನ್ನು ಹೊರಗೆಳೆದಿದ್ದಾರೆ. ಕೂಡಲೇ ಹತ್ತಿರದ ಸ್ನೋಬ್ಯಾಂಕ್ ಗೆ ಕರೆದೊಯ್ದಿದ್ದಾರೆ. ಇನ್ನೇನು ನಾಯಿಯನ್ನು ಪಶುವೈದ್ಯರಲ್ಲಿ ತೋರಿಸಬೇಕು ನಾಯಿಯು ಲವಲವಿಕೆಯಿಂದ ಸುತ್ತಲೂ ಓಡಾಡಿದೆ. ಇದೀಗ ಶ್ವಾನದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಅಧಿಕಾರಿ ತೋರಿದ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

— DC Sheriff (@dcsheriff) February 3, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...