
ಆರಾಧನಾ ರಾಥೋಡ್ ಎಂಬುವರು ಟ್ವಿಟರ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿರುವಂತೆ ಸೋನು ಸೂದ್ ಹೆಸರಿನ ಫುಡ್ ಸ್ಟಾಲ್ ಕಾಣಿಸುತ್ತದೆ. ಚಿಕ್ಕ ಚೊಕ್ಕವಾಗಿ ಇರಿಸಲಾದ ಸ್ಟಾಲ್ ಗೆ ಸೂದ್ ಹೆಸರಿಡಲು ಕಾರಣವೂ ಇದೆ. ಈ ಫುಡ್ ಸ್ಟಾಲ್ ಆರಂಭಿಸಿ ತನ್ನ ಕಾಲಮೇಲೆ ಆತ ನಿಂತುಕೊಳ್ಳಲು ಸಹಾಯ ಮಾಡಿದ್ದು ಸೋನ್ ಸೂದ್ ಅವರಂತೆ.
ಈ ವ್ಯಕ್ತಿಯ ಸಣ್ಣ ವ್ಯಾಪಾರ ಚೆನ್ನಾಗಿ ನಡೆಯುತ್ತಿರುವುದು ಕಂಡು ಖುಷಿಯಾಯಿತು. ನಿಮ್ಮ ಸಹಾಯದ ಹಸ್ತವು ಇಂದು ಅವರನ್ನು ಉದ್ಯೋಗದಲ್ಲಿ ಸಶಕ್ತರನ್ನಾಗಿಸಿದೆ ಎಂದು ಆರಾಧನಾ ಎಂಬವರು ಟ್ವೀಟ್ ಮಾಡಿದ್ದಾರೆ.
ಈ ಪೋಸ್ಟ್ಗೆ ಉತ್ತರ ನೀಡಿರುವ ಸೋನುಸೂದ್, “ಭಾಯ್ ಸೆ ಕಹೋ ಕಭಿ ಹುಮೇ ಭೀ ನಾನ್ ಖಿಲಾಯೇ (ಅಣ್ಣನಿಗೆ ಹೇಳಿ, ನನಗೂ ಒಂದು ಪ್ಲೇಟ್…..) ಎಂದು ಲವ್ ಸಿಂಬಲ್ನೊಂದಿಗೆ ಹಾಕಿದ್ದಾರೆ. ನೆಟ್ಟಿಗರು ಈ ಪೋಸ್ಟ್ ಹಾಗೂ ಸೋನು ಸೂದ್ ಉತ್ತರವನ್ನು ಮೆಚ್ಚಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.