ಯಾವುದೇ ತರಕಾರಿಯನ್ನು ಹಸಿಯಾಗಿ ತಿಂದರೆ ಅದರ ಪ್ರಯೋಜನ ಹೆಚ್ಚು. ಬೀಟ್ರೂಟ್ ಸಾಮಾನ್ಯವಾಗಿ ಪಲ್ಯಕ್ಕೆ ಹೆಚ್ಚು ಬಳಕೆಯಾಗುವ ತರಕಾರಿ. ಅಧಿಕ ರಕ್ತದತ್ತಡದಿಂದ ಬಳಲುವ ರೋಗಿಗಳಿಗೆ ಬೀಟ್ರೂಟ್ ಬಳಕೆ ಒಳ್ಳೆಯದು. ಬೀಟ್ರೂಟ್ ಅನ್ನು ಬೇಯಿಸದೆ ಹಸಿಯಾಗಿ ತಯಾರಿಸಬಹುದಾದ ಈ ಸಲಾಡ್ ಪೋಷಕಾಂಶಗಳ ಆಗರ.
ಬೇಕಾಗುವ ಸಾಮಗ್ರಿ
ತುರಿದ ಬೀಟ್ರೂಟ್ – 1 ಕಪ್
ತುರಿದ ತೆಂಗಿನ ಕಾಯಿ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಬಾಳೆಹಣ್ಣು – 1
ಬೆಲ್ಲದ ಪುಡಿ – ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ
ತುರಿದ ಬೀಟ್ರೂಟ್, ಕಾಯಿತುರಿ, ಬಾಳೆಹಣ್ಣು, ಬೆಲ್ಲ ,ಏಲಕ್ಕಿ ಇಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ಬೀಟ್ರೂಟ್ ಫ್ರೂಟ್ ಸಲಾಡ್ ಕೇವಲ 5 ನಿಮಿಷದಲ್ಲಿ ತಯಾರ್.