alex Certify ಬಿಸಿ ಬಿಸಿ ಸೋಯಾಬಿನ್ ಚಂಕ್ಸ್​ ಗ್ರೇವಿ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ಸೋಯಾಬಿನ್ ಚಂಕ್ಸ್​ ಗ್ರೇವಿ ಮಾಡಿ ಸವಿಯಿರಿ

ಬೇಕಾಗುವ ಸಾಮಗ್ರಿ: ಸೋಯಾಬಿನ್​ ಚಂಕ್ಸ್, ಈರುಳ್ಳಿ 2,  ಶುಂಠಿ, ಬೆಳ್ಳುಳ್ಳಿ ಪೇಸ್ಟ್​ 1 ಚಮಚ, ಕಾರದ ಪುಡಿ, ಅರಿಶಿಣ 1/2 ಟೇಬಲ್​ ಸ್ಪೂನ್​, ದನಿಯಾ ಪುಡಿ 1 ಚಮಚ, ಗರಂ ಮಸಾಲಾ 1/2 ಚಮಚ, ಕೊತ್ತಂಬರಿ ಸೊಪ್ಪು, ಸ್ವಲ್ಪ ತುರಿದ ಕಾಯಿ, ಏಲಕ್ಕಿ 2, ದಾಲ್ಚಿನ್ನಿ ಚಕ್ಕೆ 2, ಕಸೂರಿ ಮೇತಿ ಸ್ವಲ್ಪ, ಏಲಕ್ಕಿ 2, ಜೀರಿಗೆ 1/2 ಚಮಚ, ಟೊಮೆಟೋ 2, ಉಪ್ಪು, ಎಣ್ಣೆ, ಗಸೆ ಗಸೆ 1 ಚಮಚ, ಗೋಡಂಬಿ 5-6

ಮಾಡುವ ವಿಧಾನ: ಮಿಕ್ಸಿ ಜಾರಿನಲ್ಲಿ ಗೋಡಂಬಿ, ಟೊಮೆಟೋ, ಗಸ ಗಸೆ ಸ್ವಲ್ಪ ನೀರನ್ನ ಹಾಕಿ ಗ್ರೈಂಡ್​ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನ ಹಾಕಿ ಅದಕ್ಕೆ ಚಕ್ಕೆ, ದಾಲ್ಚಿನ್ನಿ ಎಲೆ, ಏಲಕ್ಕಿ, ಜೀರಿಗೆ, ಕಸೂರಿ ಮೇತಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್​ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ ಗರಂ ಮಸಾಲಾ, ಕಾರದ ಪುಡಿ, ದನಿಯಾ ಪುಡಿಯನ್ನ ಹಾಕಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಇದಕ್ಕೆ ಬೆಚ್ಚನೆಯ ನೀರಿನಲ್ಲಿ ಕೆಲವೇ ನಿಮಿಷಗಳ ಕಾಲ ಬೇಯಿಸಿಟ್ಟ ಸೋಯಾ ಚಂಕ್ಸ್​ಗಳನ್ನ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಐದರಿಂದ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...