alex Certify ಬಿಸಿ ಬಿಸಿ ನೀರು ದೋಸೆ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ನೀರು ದೋಸೆ ಮಾಡಿ ಸವಿಯಿರಿ

ಬೆಳಿಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಇಲ್ಲಿ ರುಚಿಯಾದ ನೀರು ದೋಸೆ ಮಾಡುವ ವಿಧಾನ ಇದೆ ನೋಡಿ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು: 2 ಲೋಟ -ಅಕ್ಕಿ, ½ ಕಪ್ ಕಾಯಿತುರಿ, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು

ಅನ್ನದ ಜತೆ ಚೆನ್ನಾಗಿರುತ್ತದೆ ಈ ‘ಟೊಮೆಟೊ ಸಾಂಬಾರ್ ‘

ಮಾಡುವ ವಿಧಾನ : ಮೊದಲಿಗೆ ಅಕ್ಕಿಯನ್ನು ತೊಳೆದು 4 ರಿಂದ 5 ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿರಿ. ನಂತರ ಇದರ ನೀರು ಬಸಿದುಕೊಂಡು ಮಿಕ್ಸಿಗೆ ಹಾಕಿ ಅದಕ್ಕೆ ಕಾಯಿತುರಿ, ಉಪ್ಪು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿಬೇಕು. ದೋಸೆ ಹಿಟ್ಟು ತೆಳುವಾಗಿರಬೇಕು.

ಗ್ಯಾಸ್ ಮೇಲೆ ತವಾ ಇಟ್ಟು ಅದು ಕಾದ ಬಳಿಕ ಎಣ್ಣೆ ಸವರಿ ದೋಸೆ ಹಿಟ್ಟನ್ನು ತವಾದ ಮೇಲೆ ತೆಳುವಾಗಿ ಹಾಕಬೇಕು. ಇದು ಬೆಂದ ಬಳಿಕ ತೆಗೆದು ಕಾಯಿ ಚಟ್ನಿ ಜತೆ ಸವಿದರೆ ರುಚಿ ಚೆನ್ನಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...