alex Certify ಬಿಸಿಲಿನಿಂದ ಚರ್ಮವನ್ನು ರಕ್ಷಿಸಲು ಇದನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಲಿನಿಂದ ಚರ್ಮವನ್ನು ರಕ್ಷಿಸಲು ಇದನ್ನು ಬಳಸಿ

ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಬೆಲೆಯ ಕ್ರೀಂಗಳನ್ನು ಹಚ್ಚುವ ಬದಲು ಈ ನೈಸರ್ಗಿಕ ಫೇಸ್ ಪ್ಯಾಕ್ ನ್ನು ಹಚ್ಚಿ.

ಅರಿಶಿನ ಪೇಸ್ಟ್: ಇದರಲ್ಲಿ ಕರ್ಕ್ಯುಮಿನ್ (curcumin) ಎಂಬ ಅಂಶವಿದ್ದು, ಇದು ಮೆಲನಿನ್ ಉತ್ಪಾದನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಮುಖಕ್ಕೆ ಹಚ್ಚಿದರೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.

ಕಲ್ಲಂಗಡಿ ಬೀಜದ ಪುಡಿ: ಇದರಲ್ಲಿ ಗ್ಲುಟಾಥಿಯೋನ್ (glutathione)ಎಂಬ ಅಂಶವಿದ್ದು, ಇದು ಮೆಲನಿನ್ ಉತ್ಪಾದನೆಯನ್ನು ತಡೆದು ಚರ್ಮ ಒರಟಾಗುವುದು ತಡೆಯುತ್ತದೆ.

ಸೌತೆಕಾಯಿ ಮತ್ತು ನಿಂಬೆ ರಸ: ಸೌತೆ ಕಾಯಿ ಚರ್ಮವನ್ನು ತಂಪಾಗಿಸುತ್ತದೆ ಮತ್ತು ನಿಂಬೆ ರಸದಲ್ಲಿ ಬ್ಲೀಚಿಂಗ್ ಅಂಶವಿದ್ದು ಇದು ಸೂರ್ಯನ ಬಿಸಿಲಿನಿಂದ ಕಪ್ಪಾದ ಬಣ್ಣವನ್ನು ನೈಸರ್ಗಿಕವಾಗಿ ತೆಗೆದುಹಾಕುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...