ನಿಮ್ಮ ಚರ್ಮವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದು ಮೆಲನಿನ್ ಎಂಬ ವರ್ಣದ್ರವ್ಯವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಬೆಲೆಯ ಕ್ರೀಂಗಳನ್ನು ಹಚ್ಚುವ ಬದಲು ಈ ನೈಸರ್ಗಿಕ ಫೇಸ್ ಪ್ಯಾಕ್ ನ್ನು ಹಚ್ಚಿ.
ಅರಿಶಿನ ಪೇಸ್ಟ್: ಇದರಲ್ಲಿ ಕರ್ಕ್ಯುಮಿನ್ (curcumin) ಎಂಬ ಅಂಶವಿದ್ದು, ಇದು ಮೆಲನಿನ್ ಉತ್ಪಾದನೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಮುಖಕ್ಕೆ ಹಚ್ಚಿದರೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.
ಕಲ್ಲಂಗಡಿ ಬೀಜದ ಪುಡಿ: ಇದರಲ್ಲಿ ಗ್ಲುಟಾಥಿಯೋನ್ (glutathione)ಎಂಬ ಅಂಶವಿದ್ದು, ಇದು ಮೆಲನಿನ್ ಉತ್ಪಾದನೆಯನ್ನು ತಡೆದು ಚರ್ಮ ಒರಟಾಗುವುದು ತಡೆಯುತ್ತದೆ.
ಸೌತೆಕಾಯಿ ಮತ್ತು ನಿಂಬೆ ರಸ: ಸೌತೆ ಕಾಯಿ ಚರ್ಮವನ್ನು ತಂಪಾಗಿಸುತ್ತದೆ ಮತ್ತು ನಿಂಬೆ ರಸದಲ್ಲಿ ಬ್ಲೀಚಿಂಗ್ ಅಂಶವಿದ್ದು ಇದು ಸೂರ್ಯನ ಬಿಸಿಲಿನಿಂದ ಕಪ್ಪಾದ ಬಣ್ಣವನ್ನು ನೈಸರ್ಗಿಕವಾಗಿ ತೆಗೆದುಹಾಕುತ್ತದೆ.