ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಹೊಟೇಲ್ ಗೆ ಹೋದಾಗ ಸೂಪ್ ಆರ್ಡರ್ ಮಾಡಿಕೊಂಡು ಸವಿಯುತ್ತೇವೆ. ಸುಲಭವಾಗಿ ಮನೆಯಲ್ಲಿ ಸೂಪ್ ಮಾಡಿಕೊಂಡು ಸವಿಯಬಹುದು. ದೇಹದ ಆರೋಗ್ಯಕ್ಕೂ ಇದು ಒಳ್ಳೆಯದು. ಜತೆಗೆ ಬೇಗ ಕೂಡ ಮಾಡಿಬಿಡಬಹುದು.
ಬೇಕಾಗುವ ಸಾಮಾಗ್ರಿ:
½ ಕೆಜಿ ಟೊಮೆಟೊ, 200 ಗ್ರಾಂ-ಕ್ಯಾರೆಟ್, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ-1/4 ಟೀ ಸ್ಪೂನ್, 1 ಟೀ ಸ್ಪೂನ್-ಸಕ್ಕರೆ, ಸ್ವಲ್ಪ ಕ್ಯಾರೆಟ್ ತುರಿ, ಕ್ರೀಂ-1 ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಕ್ಯಾರೆಟ್, ಟೊಮೆಟೊವನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಕಿ ಅದಕ್ಕೆ 1 ಕಪ್ ನೀರು, ಸ್ವಲ್ಪ ಉಪ್ಪು ಬೇಯಿಸಿ. ಇದು ಬೇಯುತ್ತಾ ಬರುತ್ತಿದ್ದಂತೆ ಗ್ಯಾಸ್ ನ ಉರಿ ಕಡಿಮೆ ಮಾಡಿ.
CWC ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ ಸೋನಿಯಾ ಗಾಂಧಿ
ಪೂರ್ತಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಎಷ್ಟು ಅಗತ್ಯವೋ ಅಷ್ಟು ನೀರು ಸೇರಿಸಿ ಕುದಿಸಿಕೊಳ್ಳಿ. ಇದಕ್ಕೆ ಕಾಳುಮೆಣಸು, ಸಕ್ಕರೆ ಸೇರಿಸಿ 10 ನಿಮಿಷ ಕುದಿಸಿಕೊಳ್ಳಿ. ನಂತರ ಒಂದು ಬೌಲ್ ಗೆ ಹಾಕಿ ಅದರ ಮೇಲೆ ಕ್ರೀಂ ಹಾಕಿ ಸ್ವಲ್ಪ ಕ್ಯಾರೆಟ್ ತುರಿ ಸೇರಿಸಿ ಸರ್ವ್ ಮಾಡಿ.