alex Certify ಬಿಳಿ ಕೂದಲು, ತಲೆಹೊಟ್ಟಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಈ ಅದ್ಭುತ ಗುಣಗಳುಳ್ಳ ಎಣ್ಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಳಿ ಕೂದಲು, ತಲೆಹೊಟ್ಟಿನ ಸಮಸ್ಯೆಗೆ ನೈಸರ್ಗಿಕ ಪರಿಹಾರ ಈ ಅದ್ಭುತ ಗುಣಗಳುಳ್ಳ ಎಣ್ಣೆ

 

ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕಳಪೆ ಆಹಾರದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಬಿಳಿ ಕೂದಲು ಕಾಣಿಸ್ತಿದ್ದಂತೆ ನಾವು ಹೇರ್‌ ಡೈ ಬಳಸಿಬಿಡುತ್ತೇವೆ. ಅಥವಾ ರಾಸಾಯನಿಕ ಮಿಶ್ರಿತ ಬಗೆಬಗೆಯ ಉತ್ಪನ್ನಗಳನ್ನು ಬಳಸುತ್ತೇವೆ. ಇದರಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ.

ಕೂದಲು ಉದುರುವುದು, ತಲೆಹೊಟ್ಟಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ ಎಳ್ಳೆಣ್ಣೆಯಲ್ಲಿದೆ. ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯನ್ನು ಇದು ನಿವಾರಿಸುತ್ತದೆ.

1. ಎಳ್ಳೆಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುವ ವಿಟಮಿನ್ ಇ, ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಪ್ರೋಟೀನ್ಗಳು ಸಿಗುತ್ತವೆ.  ಪೌಷ್ಟಿಕಾಂಶದ ಕೊರತೆಯನ್ನು ಇದು ನೀಗಿಸುತ್ತದೆ.

2. ಎಳ್ಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ.  ಇದು ನೆತ್ತಿಯ ಮೇಲೆ ಇರುವ ಬ್ಯಾಕ್ಟೀರಿಯಾವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಎಂಟಿ ಫಂಗಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೆ ಕೂದಲು ಉದುರದಂತೆ ತಡೆಯುತ್ತದೆ.

3. ಸಂಶೋಧನೆಯ ಪ್ರಕಾರ ಎಳ್ಳೆಣ್ಣೆ ಕೂದಲಿನ ಬೆಳವಣಿಗೆಗೆ ಒಳ್ಳೆಯದು ಮತ್ತು ಕೂದಲಿನ ಹೊಳಪನ್ನು ಕಾಪಾಡುತ್ತದೆ.  ಇದರಲ್ಲಿರುವ ಪ್ರೋಟೀನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ.

4. ಒಂದು ಬೌಲ್ ಮೊಸರಿಗೆ 2 ರಿಂದ 3 ಚಮಚ ಎಳ್ಳೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಇದರಿಂದ ಕೂದಲಿನ ತಲೆಹೊಟ್ಟು ಮಾಯವಾಗುತ್ತದೆ. ಬಿಳಿ ಕೂದಲಿನ ನಿವಾರಣೆಗಾಗಿ ಅಲೋವೆರಾ ಜೆಲ್‌ನೊಂದಿಗೆ ಎರಡು ಚಮಚ ಎಳ್ಳು ಎಣ್ಣೆಯನ್ನು ಮಿಶ್ರಣ ಮಾಡಿ ನಿಯಮಿತವಾಗಿ ಹಚ್ಚುತ್ತಾ ಬನ್ನಿ. ಹೀಗೆ ಮಾಡುವುದರಿಂದ ಬಿಳಿ ಕೂದಲು ಕೂಡ ಕಪ್ಪಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...